UN NETWORKS
ಉಳ್ಳಾಲ:ಕೊಲ್ಯ ಶ್ರೀ ರಾಮ ಫ್ರೆಂಡ್ಸ್ ಸರ್ಕಲ್‍ನ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭವು ಕೊಲ್ಯ ಶ್ರೀ ರಾಮಾ ಭಜನಾ ಮಂದಿರದ ಮೈದಾನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಫ್ರೊ. ಡಾ. ಜಯಶ್ರೀ ಕೆ ಉದ್ಘಾಟಿಸಿ ಮಾತನಾಡಿ, ಶ್ರೀರಾಮ ಪ್ರೆಂಡ್ಸ್ ಸರ್ಕಲ್ , ಮತ್ತು ಶ್ರೀ ರಾಮ ಮಹಿಳಾ ವಿಭಾಗದವರ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿವೆ.ಸಮಾಜಮುಖಿ ಕೆಲಸ ಮಾಡುತ್ತಾ ಮಾಡಿ ಸಂಘಟನೆ ಆಗಿ ಬೆಳೆದಿವೆ ಎಂದರು.ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಶ್ರೀ ರಾಮನ ಆದರ್ಶಗಳನ್ನು ಇಟ್ಟುಕೊಂಡು ಶ್ರೀರಾಮ ಮಂದಿರ ಮತ್ತು ಶ್ರೀ ರಾಮ ಫ್ರೆಂಡ್ ಸರ್ಕಲ್ ಉತ್ತಮ ಜೀವನ ಮಾಡುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಈ ಸಂಸ್ಕೃತಿಯನ್ನು ಇಷ್ಟು ಉತ್ತಮವಾಗಿ ಬೆಳೆಸುವುದು ಯುವಕರ ಕೆಲಸ ಎಂದು ಹೇಳಿದರು.
ಆನಂದಾಶ್ರಮ ಶಾಲಾ ನಿವೃತ್ತ ಶಿಕ್ಷಕ ಕೆ. ಆರ್. ತಂತ್ರಿ, ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ. ಕಾರ್ತಿಕ್ ವಿಶ್ವನಾಥ್ , ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸುರೇಶ್ ಪಲ್ಲವಿ, ಕರ್ನಾಟಕ ಆಹಾರ ನಿಗಮದ ಸಹಾಯಕ ವ್ಯವಸ್ಥಾಪಕ ಬಾಲಕೃಷ್ಣ ಕೊಲ್ಯ, ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಆನಂದ ಕೊಂಡಾಣ, ಮುಕಾಂಬಿಕ ಕನ್ಸಟ್ರಕ್ಷನ್‍ನ ಮಾಲಕ ಚಂದ್ರಹಾಸ್ ಪಂಡಿತ್ ಹೌಸ್, ಮಂಗಳೂರು ವಿಧಾನ ಸಭಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್ ಸಿಎಂ, ಹೇಮಲತಾ, ಕೆ.ಆರ್. ಚಂದ್ರ, ಸೋಮೇಶ್ವರ ಪಂಚಾಯತ್ ಸದಸ್ಯ ನವೀನ್ ಕನೀರ್‍ತೋಟ, ಶ್ರೀ ರಾಮ ಭಜನಾಮಂದಿರದ ಅಧ್ಯಕ್ಷ ತಾರನಾಥ ಶೆಟ್ಟಿ,ಶ್ರೀರಾಮ ಮಹಿಳಾ ವೇದಿಕೆ ಅಧ್ಯಕ್ಷೆ ದೇವಕಿ, ಶ್ರೀ ರಾಮ ಫ್ರೆಂಡ್ಸ್ ಅಧ್ಯಕ್ಷ ವಿಕ್ರಂಗಟ್ಟಿ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
ಶ್ರೀರಾಮ ಫ್ರೆಂಡ್ ಸರ್ಕಲ್, ಶ್ರೀ ರಾಮ ಮಹಿಳಾ ವಿಭಾಗದ ಸದಸ್ಯರಿಂದ ನಡೆದ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಶ್ರೀರಾಮ ಭಜನಾ ಮಂದಿರದ ಸ್ಥಾಪಕ ಗೌರವ ಅಧ್ಯಕ್ಷರಾಗಿದ್ದ ತನಿಯಪ್ಪ ಪೂಜಾರಿಗೆ ಈ ಸಂದರ್ಭ ಸನ್ಮಾನಿಸಲಾಯಿತು. ಶ್ರೀರಾಮ ಮಹಿಳಾ ವಿಭಾಗದ ಹಿರಿಯ ಸದಸ್ಯೆ ಚಂಚಲಾಕ್ಷಿ ಪ್ರಾರ್ಥನೆ ಮಾಡಿದರು ಗೌರವ ಸಲಹೆಗಾರ ಶೇಖರ್ ಕನೀರ್‍ತೋಟ ಸ್ವಾಗತಿಸಿದರು.ಚರಣ್ ವಾರ್ಷಿಕ ವರದಿ ಓದಿದರು. ಜಯಂತ್ ಪರ್ಯತ್ತೂರು ಅಭಿನಂದನಾ ಭಾಷಣ ಮಾಡಿದರು. ಅಭಿಷೇಕ್ ಉಳ್ಳಾಲ್ ಬಹುಮಾನದ ವರದಿ ಓದಿದರು ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರುಪಿಸಿದರು ಶ್ರೀ ರಾಮ ಫ್ರೆಂಡ್ಸ್ ಸರ್ಕಲ್‍ನ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕೊಲ್ಯ ವಂದಿಸಿದರು.


