UN NETWORKS
ಉಳ್ಳಾಲ: ಕ್ರಿಕೆಟ್ ಬೆಟ್ಟಿಂಗ್ ಹಾಕುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಉಳ್ಳಾಲ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಪರಿಸರದಿಂದ ಬಂಧಿಸಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಚೆಂಬುಗುಡ್ಡೆ ಮೊಂತೇರೊ ಮನೆಯ ಆಲ್ವಿನ್ ಕಿರಣ್ ಮೊಂತೇರೊ (23) ಪಿಲಾರು ಶಾಲೆ ಬಳಿಯ ಕಿಶೋರ್ ಡಿಸೋಜ (39) ಬಂಧಿತರು. ಅಕ್ರಮ ಬೆಟ್ಟಿಂಗ್ ಗೆ ಸಾರ್ವಜನಿಕರಿಂದ ಸಂಗ್ರಹಿಸಿದ್ದ ನಗದು ರೂ.2,06,000, 7 ಮೊಬೈಲ್ ಫೋನುಗಳು, ಒಂದು ಟ್ಯಾಬ್, 2 ಲ್ಯಾಪ್ ಟಾಪ್, ಮತ್ತು ಕ್ರಿಕೆಟ್ ಬೆಟಿಂಗ್ ವಿವರ ಹಾಕಿದ್ದ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ವಿಶ್ವಾಸ್ ಎಂಬಾತ ತಲೆಮರೆಸಿಕೊಂಡಿದ್ದಾನೆ.


