UN NETWORKS
ಉಳ್ಳಾಲ: ಪ್ರಸ್ತುತ ಕಬ್ಬಡ್ಡಿ ಆಟ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಆಟವಾಗಿ ಹೊರಹೊಮ್ಮಿದೆ. ಇದರಿಂದ ಆಟಗಾರರಿಗೆ ವಿಪುಲ ಅವಕಾಶವಿದೆ. ರಾಷ್ಟ್ರಮಟ್ಟದಲ್ಲಿ ಸ್ಟಾರ್ ಆಟಗಾರರಾಗಿ ಅನೇಕರು ಹೊರಹೊಮ್ಮಿದ್ದಾರೆ ಎಂದು ಸೋಮೇಶ್ವರ ಆನಂದಾಶ್ರಮ ಶಾಲೆ ಸೋಮೇಶ್ವರದ ನಿವೃತ್ತ ಮುಖ್ಯೋಪಾಧ್ಯಾಯ ಜಗನ್ನಾಥ್ ಅಭಿಪ್ರಾಯಪಟ್ಟರು.

ಅವರು ಶ್ರೀ ರಾಮ್ ಫ್ರೆಂಡ್ಸ್ ಸರ್ಕಲ್ ಕೊಲ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಹಾಗೂ ದ.ಕ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಕೊಲ್ಯ ಶ್ರೀ ರಾಮ್ ಫ್ರೆಂಡ್ಸ್ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಕೊಲ್ಯ ಶ್ರೀ ರಾಮ ಭಜನಾ ಮಂದಿರ ಬಳಿ ಮೈದಾನದಲ್ಲಿ ಶ್ರೀ ರಾಮ್ ಫ್ರೆಂಡ್ಸ್ ಸರ್ಕಲ್ ಕೊಲ್ಯ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ದ.ಕ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿದ್ದ ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ ಉಳ್ಳಾಲ ವಲಯ ಅಧ್ಯಕ್ಷ ಸುರೇಶ್ ಭಟ್ನಗರ ಮಾತನಾಡಿ ಹಿರಿಯ ಆಟಗಾರರ ಕೂಡುವಿಕೆ ಹಾಗೂ ಯುವ ಆಟಗಾರರಿಗೆ ಪಂದ್ಯಾಟದ ಮೂಲಕ ಅವಕಾಶ ಕಲ್ಪಿಸುವ ಮೂಲಕ ಆಟಗಾರರಿಗೆ ಉತ್ತೇಜನ ನೀಡುವ ಕೆಲಸ ಶ್ರೀ ರಾಮ ಫ್ರೆಂಡ್ಸ್ ಸರ್ಕಲ್ ವತಿಯಿಂದ ಆಗಿದೆ ಎಂದರು.
ಶೇಖರ ಗಟ್ಟಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರು ಹಾಗೂ ಸೋಮೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಆಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಯರ್ ನಾಗರಾಜ್, ನಿವೃತ್ತ ಅಬಕಾರಿ ನಿರೀಕ್ಷಕ ಗೋವಿಂದ ನಾಯ್ಕ್ , ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ , ಸೋಮೇಶ್ವರ ಗ್ರಾ.ಪಂ ಸದಸ್ಯ ದೀಪಕ್ ಪಿಲಾರು, ಸತೀಶ್ ಉಳ್ಳಾಲ್, ವಿಠಲ್ ಕೋಟೆಕಾರ್, ಹಿರಿಯ ಕ್ರೀಡಾಪಟು ನಿತ್ಯಾನಂದ ಮಾಡೂರು, ಭಗವಾನ್‍ದಾಸ್ ತೊಕ್ಕೊಟ್ಟು, ಶ್ರೀರಾಮ ಭಜನಾ ಮಂದಿರ ಸ್ಥಾಪಕ ಅಧ್ಯಕ್ಷ ತನಿಯಪ್ಪ ಪೂಜಾರಿ, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ತಾರನಾಥ ಗಟ್ಟಿ, ಗೌರವಾಧ್ಯಕ್ಷ ರವೀಂದ್ರ ಎಸ್. ಸೋಮೇಶ್ವರ, ಶ್ರೀ ರಾಮ ಮಹಿಳಾ ಮಂಡಲ ಅಧ್ಯಕ್ಷೆ ದೇವಕಿ ಕಾಸಿಂಬೆಟ್ಟು, ಶ್ರೀರಾಮ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅಧ್ಯಕ್ಷ ವಿಕ್ರಂ ಗಟ್ಟಿ ಉಪಸ್ಥಿತರಿದ್ದರು.ಶೇಖರ್ ಕನೀರುತೋಟ ಸ್ವಾಗತಿಸಿದರು. ವಿದ್ಯಾಧರ್ ಶೆಟ್ಟಿ ಪೊಸಕುರಲ್ ಕಾರ್ಯಕ್ರಮ ನಿರೂಪಿಸಿದರು. ಈಶ್ವರ ಪೂಜಾರಿ ವಂದಿಸಿದರು.
` ಆಟಗಾರರಿಗೆ ಸರಕಾರದ ಪ್ರೋತ್ಸಾಹ ಅಗತ್ಯ’
ಕೆಲವೇ ವರ್ಷಗಳಿಗೆ ಸಂಘಟನೆಗಳು ಸೀಮಿತವಾಗಿರುತ್ತದೆ. ಆದರೆ ಶ್ರೀ ರಾಮ ಫ್ರೆಂಡ್ಸ್ ಸರ್ಕಲ್ 50 ನೇ ವರ್ಷ ತುಂಬಿರುವುದು ದೊಡ್ಡ ಸಾಧನೆ. ಸದಸ್ಯರು ಇನ್ನಷ್ಟು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆಯನ್ನು ಇನ್ನಷ್ಟು ಬೆಳೆಸಿ ಉಳಿಸುವ ಕಾರ್ಯ ಮಾಡಬೇಕಿದೆ. ಕ್ರೀಡಾಪ್ರೇಮಿಗಳಿಗೆ ಸರಕಾರ ನೀಡುವ ಪ್ರೋತ್ಸಾಹ ಕಡಿಮೆಯಾಗಿದೆ. ಜನಸಂಖ್ಯೆ ಹೆಚ್ಚಿದ್ದರೂ ಬೆರಳೆಣಿಕೆಯ ಪುರಸ್ಕಾರ ಮಾತ್ರ ವಿಶ್ವದರ್ಜೆಯಲ್ಲಿ ಕ್ರೀಡಾಪಟುಗಳಿಗೆ ದೊರೆಯುತ್ತದೆ.
ಮುಸ್ತಾಫ ಹರೇಕಳ
ಉಪಾಧ್ಯಕ್ಷರು
ಉಳ್ಳಾಲ ಬ್ಲಾಕ್ ಕಾಂಗ್ರೆಸ್


