UN NETWORKS
ಉಳ್ಳಾಲ: ದಾರುಲ್ ಆಶ್ಅರಿಯ್ಯ ಸುರಿಬೈಲ್ ಇದರ ಆಶ್ರಯದಲ್ಲಿ ಈದ್ ಮೀಲಾದ್ ಮತ್ತು ದಾರುಲ್ ಅಶ್ ಅರಿಯದ ಶೈಖುನಾ ಸುರಿಬೈಲು ಉಸ್ತಾದರ 17ನೇ ಆಂಡ್ ನೇರ್ಚೆ ಪ್ರಯುಕ್ತ ಹಣ್ಣು ಹಂಪಲು ವಿತರಣೆ ದೇರಳಕಟ್ಟೆಯ ಎನೆಪೋಯ ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸಿದ್ದೀಕ್ ಮೋಂಟುಗೋಳಿಯವರು ಹಣ್ಣುಹಂಪಲು ವಿತರಣೆ ಬಹಳ ಉತ್ತಮ ಯೋಜನೆ. ಹಸಿದವರ ಹೊಟ್ಟೆ ತುಂಬಿಸಿದವನೇ ನಿಜವಾದ ಮನುಷ್ಯ. ಪರಸ್ಪರ ಸ್ನೇಹ ಸಂಪರ್ಕ ಬೆಳೆಯಬೇಕಾದರೆ ಹಸಿವು ಮುಕ್ತವಾಗಿ ಸಂತೋಷದಿಂದ ಇದ್ದರೆ ಮಾತ್ರ ಸಾಧ್ಯ ಎಂದರು.
ಈ ಸಂದರ್ಭ ದಾರ್ಲ್ ಅಶ್ಅರಿಯ ಮೇನೇಜರ್ ಮಹಮ್ಮದ್ ಆಲಿ ಸಖಾಫಿ, ವಾಜಿದ್ ಹನೀಫಿ, ರಶೀದ್ ಹನೀಫಿ, ಅಬ್ದುಲ್ ಅಝೀಝ್ ಮದನಿ, ಇಸ್ಮಾಯಿಲ್ ಕಿನ್ಯ, ಕರೀಂ ಕದ್ಕಾರ್, ಶರೀಫ್ ಕೋಕಳ, ಅಕ್ಬರ್ ಅಲಿ ಮದನಿ, ಝಕರಿಯ ನಾರ್ಶ , ಗೌಸ್ ಅಶ್ಅರಿಯಾ ಉಪಸ್ಥಿತರಿದ್ದರು


