UN NETWORKS
ದೇರಳಕಟ್ಟೆ: ಮಂಗಳೂರು ವಿಧಾನಸಭಾ ಕ್ಷೇತ್ರದ ಬೆಳ್ಮ ಗ್ರಾಮದ ದೇರಳಕಟ್ಟೆ-ಕಾನೆಕೆರೆ ಪ್ರದೇಶದ ಗಂಭೀರ ಸಮಸ್ಯೆಗಳಾದ ಬಹುಮಹಡಿ ವಸತಿ, ವಾಣಿಜ್ಯ ಸಂಕೀರ್ಣಗಳಿಂದ ಅವೈಜ್ಞಾನಿಕ ಡ್ರೈನೇಜ್ ಸಮಸ್ಯೆಗಳಿಂದಾಗಿ ಹೊರಡುವ ಮಲಿನ ನೀರು, ದುರ್ನಾತಯುತ ತ್ಯಾಜ್ಯಗಳನ್ನು ತೆರೆದ ಕೆರೆ ಮತ್ತು ಬಾವಿಯಲ್ಲಿ ಶೇಕರಿಸುತ್ತಿರುವ ದುರವಸ್ಥೆ, ಸ್ಥಳೀಯ ಕೆಲವು ನಿವಾಸಿಗಳ ಬಾವಿಯಲ್ಲಿ ಉರಿಸಾಧ್ಯವಾದ ತೈಲ ಅಂಶ ಪತ್ತೆ, ಕೆಲವು ನಿರ್ದಿಷ್ಟ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ, ನಿರ್ಮಾಣ ಪೂರ್ವ ನೀತಿ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಾಣಗಳ ಅವ್ಯವಸ್ಥೆ.
ಈ ಎಲ್ಲಾ ಸಮಸ್ಯೆಗಳನ್ನು ಹಲವು ವರ್ಷಗಳಿಂದ ಹಲವು ಬಾರಿ ಮನವಿಗಳನ್ನು ನೀಡಿ ಗಮನಕ್ಕೆ ತಂದಿದ್ದರೂ ನಿರ್ಲಕ್ಷತನ ತೋರಿಸಿ, ಪಕ್ಷ ಪಾತ ಧೋರಣೆ ತಳೆದ ಸ್ಥಳೀಯ ಬೆಳ್ಮ ಗ್ರಾಮ ಪಂಚಾಯತ್ ಆಡಳಿತ ಮತ್ತು ಇತರ ಸಂಬಂಧಿ ಇಲಾಖೆಗಳ ನಾಗರಿಕ ವಿರೋಧಿ ನೀತಿ ವಿರುದ್ಧ ಕಾನೆಕೆರೆ ನಿವಾಸಿಗಳು ಮತ್ತು ಸ್ಥಳೀಯ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಮ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿ, ತಕ್ಷಣ ಖುದ್ದಾಗಿ ಭೇಟಿ ನೀಡಿ ಸ್ಪಂದಿಸುವಂತೆ ಒತ್ತಾಯಿಸಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ದಕ್ಷ ಜಿಲ್ಲಾಧಿಕಾರಿಗಳಾದ ಶಶಿಕಾಂತ್ ಸೆಂಥಿಲ್ ರವರು ಪರಿಹರಿಸುವ ಭರವಸೆ ನೀಡಿದರು, ನ್ಯಾಯದ ಬೇಡಿಕೆ ಇಟ್ಟುಕೊಂಡು ಮುಂದಿನ ಹೋರಾಟದ ಬಗ್ಗೆ ನಿಯೋಗವು ಚರ್ಚಿಸಿತು.
ಭೇಟಿ ನೀಡಿದ ನಿಯೋಗದಲ್ಲಿ ಸ್ಥಳೀಯರಾದ ಮಹಮ್ಮದ್ ಫಾರೂಕ್ ಕಾನೆಕೆರೆ, ಸುಬ್ರಮಣ್ಯ ಭಟ್ ಕಾನೆಕೆರೆ, ಎಸ್.ಡಿ.ಪಿ.ಐ ಮಂಗಳೂರು ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯ, ಜಿಲ್ಲಾ ಉಪಾಧ್ಯಕ್ಷ ಆಂಟನಿ ಪಿ.ಡಿ, ಸ್ಥಳೀಯರಾದ ರಾಮಚಂದ್ರ ಭಟ್ ಗುಣಾಜೆ, ನವಾಜ್ ಕಾನೆಕೆರೆ, ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಝಾಹೀದ್ ಮಲಾರ್, ಎಸ್.ಡಿ.ಪಿ.ಐ ಬೆಳ್ಮ ಸಮಿತಿ ಅಧ್ಯಕ್ಷ ಇರ್ಫಾನ್ ಬರುವ, ಉಸ್ಮಾನ್ ಕಾನೆಕೆರೆ, ಇರ್ಷಾದ್ ಇಸ್ಮಾಯಿಲ್, ಹಸನ್ ರಾಯಲ್ ದೇರ್ಲಕಟ್ಟೆ, ಸಲಾಂ ಕಾನೆಕೆರೆ ಉಪಸ್ಥಿತರಿದ್ದರು.


