UN NETWORKS
ನರಿಂಗಾನ: ನರಿಂಗಾನದ ಯೇನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಡೆಯಿತು.
ಆಸ್ಪತ್ರೆಯ ಮರ್ಮ ಚಿಕಿತ್ಸಾ ವಿಭಾಗವನ್ನು ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ ಉದ್ಘಾಟಿಸಿದರು.
ಪ್ರಥಮ ವರ್ಷದ ಬಿ.ಎ.ಎಂ.ಎಸ್ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರೊ. ಡಾ. ರಾಘವೇಂದ್ರ ಉಡುಪ ವಿದ್ಯಾರ್ಥಿಗಳನ್ನು ಆಯುರ್ವೇದ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸಿದರು.ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ವೈದ್ಯಕೀಯ ಸೌಲಭ್ಯಗಳ ವ್ಯಾಪಾರೀಕರಣದ ಪ್ರಭಾವ ಈ ವಿಷಯದ ಕುರಿತಾಗಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಆಯುರ್ವೇದ ಡೀನ್ ಡಾ. ಪ್ರಸನ್ನ ಐತಾಳ್ ಬಹುಮಾನ ವಿತರಿಸಿದರು.
ಯೇನೆಪೋಯ ಸಂಸ್ಥೆಯ ಉಪ ಕುಲಪತಿ ಡಾ. ಸಿ. ವಿ. ರಘುವೀರ್ ಹಾಗೂ ಯೇನೆಪೊಯ ಹೋಮಿಯೋಪತಿ ಆಸ್ಪತ್ರೆ ಮತ್ತು ಕಾಲೇಜಿನ ಡೀನ್ ಡಾ.ವಿ.ವಿ. ವರ್ಣೆಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದಾರ್ಥಿಗಳು ಕ್ಯಾಂಪಸ್ ಪರಿಸರದಲ್ಲಿ ಆಯುರ್ವೇದ ಗಿಡಮೂಲಿಕೆಗಳನ್ನು ನೆಟ್ಟರು.


