UN NETWORKS
ದೇರಳಕಟ್ಟೆ: ವಿದ್ಯಾರ್ಥಿಗಳ ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಸಮತೋಲನ ಹೊಂದಲು ದೈಹಿಕ ಶಿಕ್ಷಣವೂ ಪರಿಣಾಮಕಾರಿಯಾದ ವ್ಯಾಯಾಮವಾಗಿದೆ ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಾಡಿಬಿಲ್ಡರ್ ರೇಮಂಡ್ ಡಿ’ಸೋಜ ಅಭಿಪ್ರಾಯಪಟ್ಟರು.ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ| ಎಂ ಅಬ್ದುಲ್ ರಹಮಾನ್ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಆಟೋಟ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟದ ಉಪಯೋಗ ಪಡೆಯಲು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಖಣಚೂರು ವಿದ್ಯಾ ಸಂಸ್ಥೆಯ ಹಣಕಾಸು ನಿರ್ದೇಶಕ ಅಬ್ದುಲ್ ರಹಮಾನ್ ಮಾತನಾಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಉತ್ತಮ ಪ್ರಯತ್ನಕ್ಕಾಗಿ ಶ್ಲಾಘಿಸಿದರು.
ಕಣಚೂರು ವಿದ್ಯಾಸಂಸ್ಥೆಯ ವಿವಿಧ ವಿಭಾಗದ ಪ್ರಾಂಶುಪಾಲ ಪ್ರೊ| ಇಕ್ಬಾಲ್ ಅಹಮ್ಮದ್ ಯು.ಟಿ, ಹೇಮಲತಾ, ಲಿನೆಟ್ ಡಿ’ಸೋಜ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲೆ ವಿನಿಟಾ ಗಾಮ ರೋಸ್ ಮಥಾಯಸ್ ಸ್ವಾಗತಿಸಿದರು. ನಂತರ ರಾಷ್ಟ್ರೀಯ ಏಕತೆ ದಿವಸದ ಆಚರಣೆಯ ಸಲುವಾಗಿ ಏಕತೆಗಾಗಿ ಜಾಥಾ ಹಾಗೂ ಏಕತೆಯ ಪ್ರತಿಜ್ಞೆಯನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕಿ ಲವಿನಾ ಜೊವಿಟಾ ಕ್ರಾಸ್ತ ಹಾಗೂ ಸೌಮ್ಯ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲೆ ಆನಂದಿ ವಂದಿಸಿದರು.


