UN NETWORKS
ಉಳ್ಳಾಲ: ಸೋಮೇಶ್ವರ ಉಚ್ಚಿಲದ ಬೆಟ್ಟಪ್ಪಾಂಡಿಯಲ್ಲಿ ಅಳಿವೆ ಬಾಗಿಲಿನಲ್ಲಿ ಶೇಖರಣೆಗೊಂಡ ಹೂಳಿನಿಂದ ಹೊಳೆ ನೀರು ಸಮುದ್ರಕ್ಕೆ ಹರಿಯದೆ ಕೃತಕ ನೆರೆ ಸೃಷ್ಟಿಯಾಗಿ ಹೊಳೆ ಬದಿಯ ಮನೆಗಳು ಜಲಾವೃತಗೊಂಡು ಸ್ಥಳೀಯ ನಿವಾಸಿಗಳು ಸಂಕಷ್ಟದಲ್ಲಿದ್ದಾರೆ.
ಸೋಮೇಶ್ವರ ಗ್ರಾಮದ ಕಜೆ, ಬಟ್ಟಪ್ಪಾಡಿ ಮತ್ತು ಹೊೈಗೆ ಪ್ರದೇಶದಲ್ಲಿ ಜಲಾವೃತಗೊಂಡಿದ್ದು, ಕಳೆದ 10 ದಿನಗಳಿಂದ ಹೂಳು ತುಂಬಿ ಈ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದೆ. ಈ ಪ್ರಧೇಶದಲ್ಲಿ ಮಳೆಗಾಲ ಮುಗಿದ ಬಳಿಕ ಹೊಳೆಯ ನೀರು ಹರಿವಿನ ಪ್ರಮಾಣ ಕಡಿಮೆಯಾಗಿದ್ದು ಇದರಿಂದ ಹೊೈಗೆ ಶೇಖರಣೆಗೊಳ್ಳುತ್ತಿದ್ದು ಅಲೆಯೊಂದಿಗೆ ಮರಳೂ ಬಂದು ರಾಶಿ ಬೀಳುತ್ತಿದೆ. ಪ್ರತಿವರ್ಷ ಇಂತಹ ಪ್ರಸಂಗ ಸರ್ವೇ ಸಾಮಾನ್ಯವಾಗಿದ್ದು ಸೋಮೇಶ್ವರ ಪಂಚಾಯಿತಿ ಅನುದಾನದಲ್ಲಿ ಜೆಸಿಬಿ ಮುಖಾಂತರ ಹೂಳು ತೆಗೆಯಲಾಗುತ್ತಿತ್ತು. ಅದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಈ ಬಾರಿ ಪಂಚಾಯತ್ ಹೂಳು ತೆಗೆದಿರಲಿಲ್ಲ ಈ ಕಾರಣದಿಂದ ಹೂಳಿನ ಸಮಸ್ಯೆ ಹಗೇಯೇ ಉಳಿದಿತ್ತು.
ಮರಳುಗಾರಿಕೆ ತಡೆಯಿಂದ ಸಮಸ್ಯೆ : ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಆಕ್ರಮ ಮರಳುಗಾರಿಕೆ ನಡೆಯುತ್ತಿತ್ತು ಈ ಸಂದಭರದಲ್ಲಿ ಆಳಿವೆ ಬಾಗಿಲಿನಲ್ಲಿದ್ದ ಮರಳನ್ನು ಮರಳುಗಾರಿಕೆಯಿಂದ ತೆಗೆಯಲಾಗುತ್ತಿತ್ತು. ಅದರೆ ವಾರದ ಹಿಂದ ಉಳ್ಳಲ ಪೊಲೀಸರು ದಾಳಿ ನಡೆಸಿದ ಬಳಿಕ ಮರಳುಗಾರಿಕೆ ಸ್ಥಗಿತಗೊಂಡಿದ್ದು, ಈ ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ಮನೆಗಳಿಗೆ ಕೃತಕ ನೆರೆ ಹಾವಳಿಯಾಗಿದೆ. ಈ ಪ್ರದೇಶದ ರೈಲು ಕೆಳಸೇತುವೆಯೂ ಜಲಾವೃತವಾಗಿರುವುದರಿಂದ ನಡೆದಾಡಲೂ ರಸ್ತೆಯಿಲ್ಲದ ಕಾರಣ ರೈಲು ಹಳಿಯನ್ನೇ ಬಳಸಬೇಕಾದ ಪ್ರಸಂಗ ಎದುರಾಗಿದೆ.
ಪಂಚಾಯತ್ ಎದುರು ಪ್ರತಿಭಟನೆ ಎಚ್ಚರಿಕೆ : ಈ ಪ್ರದೇಶದ ಮೂಲಬೂತ ಸೌಕರ್ಯ ಸೇರಿದಂತೆ ಆಳಿವೆ ಬಾಗಿಲಿನಲ್ಲಿ ಹೂಳೆತ್ತದಿದ್ದರೆ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ ಎಚ್ಚರಿಸಿದ್ದಾರೆ.
ತಹಸೀಲ್ದಾರ್ ಭೇಟಿ: ಮಂಗಳೂರು ತಹಶಿಈಲ್ದಾರ್ ಗುರುಪ್ರಸಾದ್ ಬಟ್ಟಪ್ಪಾಡಿಗೆ ಭೇಟಿ ನಿಈಡಿದ್ದು ಬುಧವಾರವೇ ಹೂಳು ತೆಗೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಸ್ಥಳೀಯ ಪ್ರದೇಶದಲ್ಲಿ ಒಸರಿನಿಂದ ಕೂಡಿದ್ದು, ಅಳಿವೆ ಬಾಗಿಲು ಮುಚ್ಚಲ್ಪಟ್ಟು ನೀರು ಹೆಚ್ಚಾಗುವ ಸಮಸ್ಯೆ ಪ್ರತಿವರ್ಷ ಸಾಮಾನ್ಯವಾಗಿರುವುದರಿಂದ ಪಂಚಾಯಿತಿ ಕ್ರಮ ಕೈಗೊಳ್ಳುತ್ತಾ ಬಂದಿತ್ತು, ಈ ವರ್ಷ ಅಕ್ರಮ ಮರಳುಗಾರರು ಅಳಿವೆಬಾಗಿಲು ಬಿಡಿಸಿದ್ದರಿಂದ ಪಂಚಾಯಿತಿಗೆ ದೂರು ಬಂದಿರಲಿಲ್ಲ, ಕಳೆದ ವಾರ ಮರಳುಗಾರಿಕೆಗೆ ದಾಳಿ ನಡೆದ ಬಳಿಕ ಮತ್ತೆ ಅಳಿವೆ ಬಾಗಿಲು ಮುಚ್ಚಲ್ಪಟ್ಟು ಸಮಸ್ಯೆ ಎದುರಾಗಿದ್ದು ಪಂಚಾಯಿತಿ ಕ್ರಮ ಕೈಗೊಳ್ಳಲಿದೆ ಎಂದು ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ತಿಳಿಸಿದ್ದಾರೆ.


