UN NETWORKS
ತೊಕ್ಕೊಟ್ಟು : ಚರ್ಚ್ ವಾಳೆಗಳ ನಡುವೆ ಒಗ್ಗಟ್ಟು ಮತ್ತು ಬಲವನ್ನು ಹೆಚ್ಚಿಸುವ ಉದ್ದೇಶದಿಂದ ವಾಳೆಗಳ ನಡುವಿನ ಕ್ರೀಡಾಕೂಟ ಸಹಕಾರಿ ಎಂದು ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನ ಪ್ರಧಾನ ಧರ್ಮಗುರು ಫಾ. ಜೆ.ಬಿ ಸಲ್ದಾನ್ಹ ಅಭಿಪ್ರಾಯಪಟ್ಟರು.
ಅವರು ಸಿ.ಎಲ್.ಸಿ ಪೆರ್ಮನ್ನೂರು ತೊಕ್ಕೊಟ್ಟು ಪೆರ್ಮನ್ನೂರು ಚರ್ಚ್ ಮೈದಾನದಲ್ಲಿ ವಾಳೆಗಳ ನಡುವೆ ಭಾನುವಾರ ಆಯೋಜಿಸಿದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಸಿ.ಎಲ್.ಸಿ ಸಮುದಾಯ ದ ನಿರ್ದೇಶಕ ಫಾ.ಮ್ಯಾಕ್ಸಿಂ ಮಿಸ್ಕಿತ್, ಸಿ.ಎಲ್.ಸಿ ಕೇಂದ್ರದ ಅಧ್ಯಕ್ಷ ಉಲ್ಲಾಸ್ ಡಿಸೋಜ, ಸಹಾಯಕ ಧರ್ಮಗುರು ಫಾ. ಲೈಝಿಲ್ ಮುಖ್ಯ ಅತಿಥಿಗಳಾಗಿದ್ದರು.ಪ್ರಮೋದ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೆಲ್ವಿನ್ ಡಿಸೋಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್, ಉಪಸ್ಥಿತರಿದ್ದರು.ಸಿ.ಎಲ್.ಸಿ ಅಧ್ಯಕ್ಷ ಜೋಸೆಫ್ ಡಿಸೋಜ ಸ್ವಾಗತಿಸಿದರು. ಹೆರಾಲ್ಡ್ ಸೆರಾ ವಂದಿಸಿದರು. ಮೌರಿಸ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.


