UN NETWORKS
ಮಂಗಳೂರು: ಬೆಂದೂರ್ ವೆಲ್ ಸಿಟಿ ಆರ್ಕೇಡ್ ಕಟ್ಟಡದಲ್ಲಿ `ಒಲಿವ್’ ಹೋಮ್ ಡೆಕೋರ್ ಮತ್ತು ಡಿಸೈನಿಂಗ್ ಮಳಿಗೆಯ ಉದ್ಘಾಟನೆಯನ್ನು ರಾಜ್ಯ ವಿಧಾನಪರಿಷತ್ ಸದಸ್ಯ , ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ ಫಾರೂಕ್ ಗುರುವಾರ ಉದ್ಘಾಟಿಸಿದರು.
ಆಧುನಿಕ ಡಿಸೈನ್ ಗಳನ್ನು ಮಳಿಗೆ ಒಳಗೊಂಡಿದೆ. ಹಲವು ವಿನ್ಯಾಸಗಳಿರುವ ಕಲಾಕೃತಿಗಳು ಇರುವುದು ಮಳಿಗೆಯ ವಿಶೇಷತೆ. ಮಂಗಳೂರಿನಲ್ಲಿ ಇಂತಹ ಮಳಿಗೆಯ ಅಗತ್ಯತೆ ಇದೆ. ಬೆಳವಣಿಗೆ ಹೊಂದುತ್ತಿರುವ ನಗರದಲ್ಲಿ ಆಧುನಿಕ ಶೈಲಿಯ ಮ್ಯಾಟಿಂಗ್, ವಿದೇಶಿ ವಿನ್ಯಾಸದ ಬೆಡ್ ಎಲ್ಲವೂ ಅಗತ್ಯ. ಮಳಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿ ಎಂದು ಹಾರೈಸಿದರು. ಮಂಗಳೂರು ಉತ್ತರ ಕ್ಷೇತ್ರ ಮಾಜಿ ಶಾಸಕ ಮೊಯ್ದೀನ್ ಬಾವಾ ಮಾತನಾಡಿ, ಮಳಿಗೆ ಅಭಿವೃದ್ಧಿ ಹೊಂದಿ ಜಿಲ್ಲೆ ಮತ್ತು ರಾಜ್ಯಾದ್ಯಂತ ಶಾಖೆಗಳ ನಿರ್ಮಾಣವಾಗಲಿ. ಮಳಿಗೆ ಮಾಲೀಕರ ಸಾಧನೆ ನಗರದ ಎಲ್ಲಾ ಜನರಿಗೆ ಕೈಗೂಡಲಿ ಎಂದು ಹಾರೈಸಿದರು.
ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಸದಖತುಲ್ಲಾ ಫೈಝಿ ದುಆ ನೆರವೇರಿಸಿದರು. ಸೈಯ್ಯಿದ್ ನೌಷಾದ್, ಅಮೀರ್ ಶೇಖ್, ನೌಝೀಲ್ ಹಸನ್ ಪಾಲುದಾರಿಕೆಯಲ್ಲಿ ಸಂಸ್ಥೆ ಶುಭಾರಂಭಗೊಂಡಿದೆ. ಮಹಾನಗರ ಪಾಲಿಕೆ ಸದಸ್ಯ ನವೀನ್ ಆರ್ ಡಿಸೋಜ, ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಎಸ್ ಎಸ್ ಎಫ್ ಮುಖಂಡ ಶಾಫಿ ಸಅದಿ ಬೆಂಗಳೂರು,ಈ ಸಂದರ್ಭ ಹಿರಿಯ ಅಬ್ದುಲ್ ಖಾದರ್, ಮಹಮ್ಮದ್ ಯೂನುಸ್, ನ್ಯಾಯವಾದಿ ಮಹಮ್ಮದ್ ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು. ಮಳಿಗೆ ಪಿಒಪಿ ಡೆಕಾರ್, ಕಾರ್ಪೆಂಟ್ರಿ, ಇಲೆಕ್ಟ್ರಿಕಲ್ ಆಂಡ್ ಪ್ಲಂಬಿಂಗ್, ಅಲ್ಯುಮಿನಿಯಂ ಆಂಡ್ ಗ್ಲಾಸ್, ಪೈಂಟಿಂಗ್, ಬ್ಲೈಂಡ್ಸ್ ಆಂಡ್ ಕರ್ಟೇನ್ಸ್, ಟೈಲ್ಸ್ ಆಂಡ್ ಪ್ಲಾಸ್ಟರ್ಸ್, ಫ್ಯಾಬ್ರಿಕೇಷನ್ ಕೆಲಸ ನಿರ್ವಹುವುದಾಗಿ ಪಾಲುದಾರ ಸೈಯ್ಯಿದ್ ನೌಷಾದ್ ತಿಳಿಸಿದ್ದಾರೆ.


