UN NETWORKS
ತೊಕ್ಕೊಟು: ಬಿ.ಜೆ.ಪಿ. ಮಂಗಳೂರು ಕ್ಷೇತ್ರ ಸಮಿತಿಯ ವತಿಯಿಂದ ತೊಕ್ಕೊಟು ಬಿ.ಜೆ.ಪಿ. ಕಛೇರಿಯಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ವಾಲ್ಮೀಕಿ ದಿನಾಚರಣೆ ಮಾಡಲಾಯಿತು.
ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್.,ತಾಲೂಕ್ ಪಂ.ಸದಸ್ಯರಾದ ರವಿಶಂಕರ್, ನಗರ ಸಭಾ ಸದಸ್ಯೆ ಗೀತಾ ಬಾಯಿ, ಪದಾಧಿಕಾರಿಗಳಾದ ಪ್ರಕಾಶ್ ಸಿಂಫೋನಿ, ಹರಿಯಪ್ಪ ಸಾಲ್ಯಾನ್, ಹೇಮಂತ್ ಶೆಟ್ಟಿ ಮತ್ತು ಪ್ರಮುಖರಾದ ರವಿ ಸೋವೂರ್, ರಂಜಿತ್ ಗಟ್ಟಿ,ಉಮೇಶ್ ಇನ್ನಿತರರು ಉಪಸ್ಥಿತರಿದ್ದರು.


