UN NETWORKS
ಉಳ್ಳಾಲ: ಕುಸ್ತಿ ಪಂದ್ಯಾಟ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದ್ದು, ಈ ಕ್ರೀಡೆಯನ್ನು ಗ್ರಾಮೀಣ ಪ್ರದೇಶದಲ್ಲಿ ಯುವಜನತೆ ಅಭ್ಯಾಸ ಮಾಡಿ ನಮ್ಮ ಊರು ಸೇರಿದಂತೆ ದೇಶಕ್ಕೆ ಹೆಸರು ತರುವ ಕಾರ್ಯ ಮಾಡಬೇಕು ಯುವ ಪ್ರತಿಭೆಗಳಿಗೆ ಇಂತಹ ಪಂದ್ಯಾಟ ವೇದಿಕೆಯಾಗಲಿ ಎಂದು ಉಳ್ಳಾಲ ನಗರಸಭೆಯ ಸದಸ್ಯೆ ಹಾಗೂ ಅಂತರಾಷ್ಟ್ರೀಯ ಫವರ್ ಲಿಫ್ಟರ್ ಗೀತಾಬಾಯಿ ತೊಕ್ಕೊಟ್ಟು ಅಭಿಪ್ರಾಯಪಟ್ಟರು.
ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿ.ಪ್ರಾ. ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲ ಶಾರದನಿಕೇತನದಲ್ಲಿ ನಡೆಯುತ್ತಿರುವ 71ನೇ ಉಳ್ಳಾಲ ದಸರಾ ಪ್ರಯುಕ್ತ ಸೋಮವಾರ ಶಾರದನಿಕೇತನದ ಸಭಾಂಗಣದಲ್ಲಿ ನಡೆದ ದಿ| ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥ 18ನೇ ವರ್ಷದ ಬೆಳ್ಳಿಗದೆಯ ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.ಉಳ್ಳಾಲ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಶ್ರೀಕರ ಕಿಣಿ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಸುಭಾಶ್ ಅಮೀನ್ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಳ್ಳಾಲ ನಗರಸಭೆ ಸದಸ್ಯೆ ಮಮತ ರಾಘವ ಪುತ್ರನ್, ಮಾರುತಿ ಯುವಕ ಮಂಡಲ ಅಧ್ಯಕ್ಷ ಅಶ್ವಿನ್ ಕೋಟ್ಯಾನ್, ಉದ್ಯಮಿ ಸುಧೀರ್ ಸುವರ್ಣ, ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಪುತ್ರನ್, ಉಳ್ಳಾಲ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಯಶವಂತ ಪಿ. ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜೇಶ್ ಬಂಗೇರ, ಮಧುರಾಜ್ ಅಮೀನ್, ಗುರುಪ್ರಸಾದ್, ಅಶ್ವಥ್ ಪುತ್ರನ್, ಕೃಷ್ಣ ರಾಜ್ ಎಮ್. ಪುತ್ರನ್, ಕಾಶೀನಾಥ್ ಪುತ್ರನ್, ತಿಲಕ್ ಎಸ್ ಬಂಗೇರ, ನವೀನ್ ಪುತ್ರನ್, ರೋಹಿದಾಸ್ ಬಂಗೇರ ಉಪಸ್ಥಿತರಿದ್ದರು. ಕಪಿಲ್ ಪುತ್ರನ್ ಸ್ವಾಗತಿಸಿದರು. ವಿಶ್ವನಾಥ್ ಬಂಗೇರ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಯಶವಂತ್ ಅಮೀನ್ ವಂದಿಸಿದರು.


