UN NETWORKS
ಉಳ್ಳಾಲ: ಯೇನೆಪೊಯ ವಿಶ್ವವಿದ್ಯಾಲಯದ ಡಾ| ಭುವನೇಶ್ ಸುಖ್ಲಾಲ್ ಕಲಾಲ್ ಮತ್ತು ಸೈಯದ್ ಇಮ್ರಾನ್ ಅವರಿಗೆ “ಯಂಗ್ ರಿಸೆರ್ಚ್” ಪ್ರಶಸ್ತಿ ಯನ್ನು ಕೊಟ್ಟು ಗೌರವಿಸಲಾಯಿತು.
ಚೆನ್ನೈನಲ್ಲಿ ವೀನಸ್ ಇಂಟರ್ನ್ಯಾಷನಲ್ ಫೌಂಡೇಶನ್ ಆಯೋಜಿಸಿದ “ವಾರ್ಷಿಕ ಹೆಲ್ತ್ ಕೇರ್ ಮೀಟ್ 2018″ರಲ್ಲಿ ಯೇನೆಪೊಯ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಡಾ| ಭುವನೇಶ್ ಸುಖ್ಲಾಲ್ ಕಲಾಲ್ ಮತ್ತು ನರ್ಸಿಂಗ್ ವಿಭಾಗದ ಸಯ್ಯದ್ ಇಮ್ರಾನ್ ಅವರಿಗೆ “ಯಂಗ್ ರಿಸೆರ್ಚ್” ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು.
ಆರೋಗ್ಯ ಸೇವೆ, ರೋಗಿಗಳ ಸುರಕ್ಷತೆ ಮತ್ತು ಆರೈಕೆ ಗುಣಮಟ್ಟವನ್ನು ಸುಧಾರಿಸುವಲ್ಲಿ ಅವರ ಅತ್ಯುತ್ತಮ ಕೊಡುಗೆಗಾಗಿ ಮತ್ತು ಸಂಶೋಧನಾ ವೃತ್ತಿಪರರನ್ನು ಗುರುತಿಸಲು ಈ ಪ್ರಶಸ್ತಿಯನ್ನು ಕೊಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


