UN NETWORKS
ಉಳ್ಳಾಲ: ಇಲ್ಲಿನ ಸೈಯ್ಯದ್ ಮದನಿ ದರ್ಗಾ ಅಧೀನದಲ್ಲಿ ಕಾರ್ಯಾಚರಿಸುವ ಹಿಫ್ಲ್ ಕುರ್ ಆನ್ . ದ ಅವಾ ಶರೀಯತ್ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ 48 ನೇ ಜನ್ಮದಿನಾಚರಣೆಯ ಪ್ರಯುಕ್ತ ದರ್ಗಾ ವಠಾರದಲ್ಲಿ ಸಚಿವರ ದೀರ್ಘಾಯುಷ್ಯ ಮತ್ತು ಆರೋಗ್ಯ ಕಾಪಾಡುವಂತೆ ಹಾಗೂ ಉತ್ಸಾಹದಿಂದ ಜನಸೇವೆಯನ್ನು ಮುಂದುವರಿಸುವಂತೆ ಕುರ್ ಆನ್ ಪಾರಾಯಣ ಹಾಗೂ ದುಆ ನೆರವೇರಿಸಿದರು.
ಕೇಂದ್ರ ಜುಮಾ ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಬಾಖವಿ, ಇಬ್ರಾಹಿಂ ಅಹ್ಸನಿ, ಪ್ರ. ಕಾ ಮಹಮ್ಮದ್ ತ್ವಾಹ, ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಕಾರ್ಯಕ್ರಮ ಸಂಯೋಜಕ ಅಹಮ್ಮದ್ ಬಾವಾ ಕೊಟ್ಟಾರ, ಯು.ಟಿ.ಇಲ್ಯಾಸ್, ಇಬ್ರಾಹಿಂ ಕಕ್ಕೆತೋಟ, ಉಪಾಧ್ಯಕ್ಷರುಗಳಾದ ಬಾವ ಮಹಮ್ಮದ್, ಯು.ಕೆ ಮೋನು ಇಸ್ಮಾಯಿಲ್, ಯು.ಕೆ ಇಲ್ಯಾಸ್ ಬಸ್ತಿಪಡ್ಪು, ಅಬೂಬಕರ್ ಕಲ್ಲೂರು, ಹನೀಫ್ ಸೋಲಾರ್, ಎ.ಕೆ ಮೊಯ್ಯುದ್ದೀನ್ ಉಪಸ್ಥಿತರಿದ್ದರು.


