UN NETWORKS
ತೊಕ್ಕೊಟ್ಟು: ಮಂಜನಾಡಿ ಅಲ್ ಮದೀನಾ ಶಾಲೆಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವಕ್ಫ್ ಸಚಿವ ಝಮೀರ್ ಅಹಮ್ಮದ್ ಖಾನ್ ಅವರು ಪ್ರತಿಭಟನಾ ಸಭೆ ಎದುರಿನಲ್ಲೇ ಮಂಗಳೂರಿಗೆ ವಾಪಸ್ಸಾದರು. ಈ ವೇಳೆ ಪ್ರತಿಭಟನಾಕಾರರಿಗೆ ಕಾರಿನ ಒಳಗಡೆಯಿಂದಲೇ ಕೈ ತೋರಿಸಿದ ಸಚಿವರ ನಡೆಯನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ ಶ್ಲಾಘಿಸಿದರು.
ಸಚಿವ ಖಾದರ್ ಅವರ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ನೋಡಿ ಸಚಿವ ಝಮೀರ್ ಅವರಿಗೆ ಖುಷಿಯಾಗಿದೆ. ಅದಕ್ಕಾಗಿ ಅವರು ಕಾರು ನಿಲ್ಲಿಸಿ ಬಿಜೆಪಿಯವರಿಗೆ ಅಭಿನಂದನೆ ಸಲ್ಲಿಸಿದರು ಎಂದು ಭಾಷಣದಲ್ಲಿ ತಿಳಿಸಿದರು.


