UN NETWORKS
ಮಂಗಳೂರು:ದ.ಕ ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ ಮತ್ತು ಸ್ತ್ರೀ ಜಾಗೃತಿ ಸಮಿತಿ ಹಾಗೂ ಕುಂಜತ್ತ್ ಬೈಲ್ ಅಂಗನವಾಡಿ ಕಾರ್ಯಕತೆಯರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಸಮಾಜ ಸೇವಕಿ ನಂದಾ ಪಯಾಸ್ ಸ್ವಚ್ಚತಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಗಾಂಧಿ ಜಯಂತಿಯಂದು ಹುಟ್ಟಿದ ಹಿಸಾಂ ರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.ಕುಂಜತ್ತ್ ಬೈಲ್ ಪ್ರದೇಶವನ್ನು ಸ್ವಚ್ಚತೆಗೊಳಿಸಿದರು.ಮಹಿಳಾ ಕಾಂಗ್ರೆಸ್ ಸುರತ್ಕಲ್ ಘಟಕ ಅಧ್ಯಕ್ಷೆ ಶಕುಂತಳಾ ಕಾಮತ್, ಸ್ತ್ರೀ ಜಾಗೃತಿ ಸಮಿತಿ ಸಂಚಾಲಕಿ ಸಂಶಾದ್, ರತನ್ ಉಪಸ್ಥಿತರಿದ್ದರು.


