UN NETWORKS
ಉಳ್ಳಾಲ: ಯಾಗ ಹಲವು ಆಗಿದ್ದರೂ ಶಾಸ್ತ್ರೀಯವಾಗಿ ಮಾಡಲು ಎಲ್ಲವೂ ಸಾಧ್ಯವಾಗಿಲ್ಲ. ಆದರೆ ಕೊಂಡೆವೂರುನಲ್ಲಿ ನಡೆಯಲಿರುವ ವಿಶ್ವ ಜೀತ್ ಅವಿರಾತ್ರ ಸೋಮಯಾಗ ಬಹಳಷ್ಟು ಪ್ರಾಮುಖ್ಯತೆ ಪಡದಿದೆ. ಇದು ಸ್ಮೃತಿಗೆ ಸಂಬಂಧಪಟ್ಟ ಯಾಗವಾಗಿದ್ದು ಅನ್ನಾಹಾರ ಇಲ್ಲದೇ ಎಲ್ಲರೂ ಯಾಗದಲ್ಲಿ ಭಾಗವಹಿಸಬೇಕು ಎಂದು ಶ್ರೀ ಶ್ರೀ ಈ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಜಗದ್ಗುರು ಶ್ರೀನಿತ್ಯಾನಂದ ಮಹಾಪೀಠಂ ಕೊಂಡೆವೂರು ಇಲ್ಲಿ ಫೆ.18-25ರವರೆಗೆ ನಡೆಯಲಿರುವ ವಿಶ್ವಜೀತ್ ಅವಿರಾತ್ರ ಸೋಮಯಾಗದ ಉಳ್ಳಾಲ ವಲಯ ಸಮಿತಿಯ ವತಿಯಿಂದ ತೊಕ್ಕೊಟ್ಟುವಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ರವೀಂದ್ರಶೆಟ್ಟಿ ಉಳಿದೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಕೊಂಡೆವೂರಿನಲ್ಲಿ ನಡೆಯಲಿರುವ ಯಾಗವನ್ನು ಎಲ್ಲರೂ ಸೇರಿ ಭಾಗವಹಿಸುವ ಮೂಲಕ ಯಶಸ್ಸುಗೊಳಿಸಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಉಳ್ಳಾಲ ವಲಯ ಸಮಿತಿಯ ಜಿತೇಂದ್ರ ಕೊಟ್ಟಾರಿ, ಮೋನಪ್ಪ ಭಂಡಾರಿ, ಭಾಸ್ಕರ ರೈ, ಕೆ.ಟಿ. ಸುವರ್ಣ, ರವೀಂದ್ರ ರೈ ಹರೇಕಳ, ಚಂದ್ರಹಾಸ್ ಅಡ್ಯಂತಾಯ, ಜಿ.ಪಂ. ಸದಸ್ಯೆ ಧನಲಕ್ಷ್ಮೀಗಟ್ಟಿ, ಸಂತೋಷ್ ಬೋಳಿಯಾರ್, ಚಂದ್ರಶೇಖರ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್. ಆಡಳಿತ ಮೊಕ್ತೇಸರ ಭಾಸ್ಕರ ಐತಾಳ್, ಉಪಸ್ಥಿತರಿದ್ದರು. ಚಂದ್ರಹಾಸ್ ಪಂಡಿತ್ ಹೌಸ್ ಸ್ವಾಗತಿಸಿದರು. ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಣೆಗೈದರು.


