UN NETWORKS
ತೊಕ್ಕೊಟ್ಟು: ಇತಿಹಾಸ ಪ್ರಸಿದ್ಧ ಸಂತ ಸಬೆಸ್ಟಿಯನ್ ಧರ್ಮ ಕೇಂದ್ರಕ್ಕೆ ಸೌಹಾರ್ದ ಭೇಟಿ ನೀಡಿ ರೆವರೆಂಡ್ ಫಾದರ್ ಜೆ.ಬಿ. ಸಲ್ದಾನ ಅವರು ಔತಣ ಕೂಟವೊಂದನ್ನು ಏರ್ಪಡಿಸಿ ನಮ್ಮ ಜತೆ ಚರ್ಚೆ ಮಾಡಿ ಸ್ವಚ್ಚತೆ ಮತ್ತು ಮಾಧಕ ದ್ರವ್ಯ ಮುಕ್ತ ಮಾಡುವ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಸಂಘ ಸಂಸ್ಥೆಗಳು ಜತೆಗೂಡಿ ಈ ಕೆಲಸ ಮಾಡಬಹುದು ಎಂಬ ಬಗ್ಗೆ ಕೂಡಾ ಚರ್ಚೆಯಾಗಿದೆ. ಸ್ವಚ್ಛತೆ ಕಾಪಾಡುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದು ಸಚಿವ ಖಾದರ್ ಹೇಳಿದರು.
ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದರು.ಈ ಸಂದರ್ಭ ನಿತ್ಯಾಧರ್ ಸಹಾಯ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಎಲಿಯಾಸ್ಡಿ ಸೋಜ, ಉಳ್ಳಾಲ ನಗರ ಸಭೆ ಸದಸ್ಯರಾದ ಬಾಜಿಲ್ಡಿ ಸೋಜ, ವೀಣಾಡಿ ಸೋಜ, ಯು.ಎ. ಇಸ್ಮಾಯಿಲ್, ಅಯ್ಯೂಬ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ಡಿ ಸೋಜ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡೀಸ್, ಸದಸ್ಯರಾದ ಹೆರಾಲ್ಡ್ಡಿ ಸೋಜ, ನವೀನ್ಡಿ ಸೋಜ, ಡೆಮೆಸ್ಟ್ರಿಯಸ್ಡಿ ಸೋಜ , ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಜಾನ್ಡಿ ಸೋಜ, ಕ್ಲಿಕ್ ಚಂದ್ರಕಾಂತ್ ಮೊದಲಾದವರು ಉಪಸ್ಥಿತರಿದ್ದರು.


