UN NETWORKS
ಉಳ್ಳಾಲ: ಅಧಿಕಾರ ಇರುವ ಸಂದರ್ಭ ಜನ ಸೇರುವುದು ಮುಖ್ಯವಲ್ಲ, ತೀರಿ ಹೋದ ನಂತರವೂ ಜನ ಸೇರುತ್ತಾರೆಂದರೆ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ಆಗುತ್ತದೆ. ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಬಾಳಿದ ದೇವದಾಸ್ ಶ್ರೀಯಾನ್ ಅವರ ಕುಟುಂಬಸ್ಥರಿಗೆ ದು:ಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಇದರ ಅಧ್ಯಕ್ಷರಾಗಿದ್ದುಕೊಂಡು, ಕೋಟೆಕಾರು ಪಟ್ಟಣ ಪಂಚಾಯಿತಿನಲ್ಲಿ ಕಂದಾಯ ನಿರೀಕ್ಷಕರಾಗಿ , ಹಲವು ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ದೇವದಾಸ್ ಶ್ರೀಯಾನ್ ಇವರ ಆತ್ಮಕ್ಕೆ ಶಾಂತಿ ಕೋರಿ ತೊಕ್ಕೊಟ್ಟುವಿನಲ್ಲಿ ಭಾನುವಾರ ಜರಗಿದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಮಂಡಲ ಪಂಚಾಯಿತಿ ಅವಧಿಯಲ್ಲಿ ಕೆಲಸಕ್ಕೆ ಸೇರಿದ ದೇವದಾಸ್ ಶ್ರೀಯಾನ್ ನಿಸ್ವಾರ್ಥ ಸೇವಾ ಮನೋಭಾವದವರಾಗಿದ್ದರು. ಪಂಚಾಯಿತಿಗೆ ಬರುವ ಪ್ರತಿಯೊಬ್ಬರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಋಣ, ಪ್ರೀತಿ, ಗೌರವವನ್ನು ಉಳಿಸುವ ಕಾರ್ಯ ಅವರಿಂದ ಆಗಿದೆ. ಅವರ ಹೆಸರು ಶಾಶ್ವತವಾಗಿ ಉಳಿಯುವ ಸಲುವಾಗಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ದೇವದಾಸ್ ಅವರ ಹೆಸರನ್ನು ಇಡುವಂತೆ ಸಚಿವರಲ್ಲಿ ಕೋರುತ್ತೇನೆಂದು ತಿಳಿಸಿದರು.
ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಜೆ.ಬಿ ಸಲ್ದಾನ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸರಕಾರಿ ಸೇವೆಯಲ್ಲಿದ್ದುಕೊಂಡು ಸಮಾಜಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀಯಾನ್ ಅವರ ನಿಧನದ ದು:ಖವನ್ನು ಮನೆಯವರಿಗೆ ಸಹಿಸುವ ಶಕ್ತಿಯನ್ನು ನೀಡುವುದರ ಜೊತೆಗೆ ಬಾಳು ಸುಗಮವಾಗಲಿ ಎಂದರು.
ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ವ್ಯಾಯಾಮ ಶಾಲೆಯನ್ನು ಮಂದಿರವನ್ನಾಗಿ ಪರಿವರ್ತಿಸುವ ಕನಸು ಕಂಡಿದ್ದ ಶ್ರೀಯಾನ್ ಅವರ ಉದ್ದೇಶವನ್ನು ಎಲ್ಲರೂ ಕೈಜೋಡಿಸಿ ಪೂರೈಸಬೇಕಿದೆ. ಈ ಮೂಲಕ ಅವರ ಹೆಸರು ಅಮರವಾಗಿ ಉಳಿಯುವಂತಹ ಕಾರ್ಯವನ್ನು ಮಾಡಬೇಕಿದೆ ಎಂದರು.
ಬ್ರಹ್ಜಶ್ರೀ ಬಿಲ್ಲವ ವೇದಿಕೆ ಅದ್ಯಕ್ಷ, ಕೆ.ಟಿ.ಸುವರ್ಣ, ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಜಯರಾಮ ಶೆಟ್ಟಿ, ಭಗವತಿ ಕ್ಚೇತ್ರದ ಅದ್ಯಕ್ಷ ಚಂದ್ರಹಾಸ್ ಉಳ್ಳಾಲ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಅದ್ಯಕ್ಷ ಚಂದ್ರಶೇಖರ್ ಉಚ್ಚಿಲ್, ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ಮಾತೃಭೂಮಿ ಸೊಸೈಟಿ ಅಧ್ಯಕ್ಷ ಭಾಸ್ಕರ್ ದೇವಸ್ಯ, ವಿಧ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ರವೀಂದ್ರ ಶೆಟ್ಟಿ ಉಳಿದೊಟ್ಟು, ನಗರಸಭಾ ಮಾಜಿ ಸದಸ್ಯ ದಿನೇಶ್ ರೈ, ಹಿಂದೂ ಯುವ ಸೇನಾ ಅದ್ಯಕ್ಷ ಯಶೋಧರ ಚೌಟ ಎಕ್ಕೂರು, ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಟ್ರಸ್ಟಿಗಳಾದ ರಾಜೀವ ಮೆಂಡನ್, ವಿಠಲ ಶ್ರೀಯಾನ್, ಕುಟುಂಬಿಕರಾದ ನವೀನ್ ಬೋಳಾರ ಮುದೋಳ, ಪ್ರದೀಪ್ ಶ್ರೀಯಾನ್, ಹರ್ಷ ಫೈನಾನ್ಸ್ ನ ಹರೀಶ್ ಕುತ್ತಾರ್, ವಿಶ್ವ ಹಿಂದೂ ಪರಿಷತ್ ನ ಗೋಪಾಲ್ ಕುತ್ತಾರ್, ಬಿರ್ವೆರ್ ಕುಡ್ಲದ ಚಂದ್ರಹಾಸ್ ಪಂಡಿತ್ ಹೌಸ್, ಉಮಾಮಹೇಶ್ವರಿ ಕ್ಷೇತ್ರದ ರಘುರಾಮ ಶೆಟ್ಟಿ ಕಾಪಿಕಾಡು, ಭಗವತಿ ಸಹಕಾರ ಬ್ಯಾಂಕ್ ನ ಸುರೇಶ್ ಭಟ್ನಗರ, ಕೋಟೆಕಾರು ಗ್ರಾ.ಪಂ ಉಪಾಧ್ಯಕ್ಷ ಅನಿಲ್ ಬಗಂಬಿಲ, ಉಳ್ಳಾಲ ನಗರಸಭೆ ಮಾಜಿ ಅಧ್ಯಕ್ಷ ಹುಸೈನ್ ಕುಂಞಮೋನು, ನಗರಸಭೆ ಸದಸ್ಯರುಗಳಾದ ಬಾಝಿಲ್ ಡಿಸೋಜ, ಮುಸ್ತಾಕ್ ಪಟ್ಲ, ಭವಾನಿ, ನಮಿತಾ ಗಟ್ಟಿ , ಶಶಿಕಲಾ ಚೆಂಬುಗುಡ್ಡೆ ಹಾಗೂ ದಿನಕರ್ ಉಳ್ಳಾಲ್, ಹಿರಿಯರಾದ ಸುಹಾಸಿನಿ ಬಬ್ಬುಕಟ್ಟೆ ಹಾಗೂ ಲಲಿತಾ ಸುಂದರ್, ಜೀವನ್ ತೊಕ್ಕೊಟ್ಟು , ಮುರಳೀಧರ್ , ಪ್ರವೀಣ್ ಗಾಂಧಿನಗರ ಪುರುಷೋತ್ತಮ್ ಕಲ್ಲಾಪು, ಅನಿಲ್ ದಾಸ್, ಸುರೇಶ್ ಸಾಲ್ಯಾನ್, ಸತೀಶ್ ಕರ್ಕೇರ, ದೇವದಾಸ್ ಕೊಲ್ಯ, ರಮೇಶ್ ಕೊಲ್ಯ, ಪ್ರಕಾಶ್ ಹೆಚ್ ಕೊಲ್ಯ, ರಾಜೇಶ್ ಕಾಪಿಕಾಡು ಉಪಸ್ಥಿತರಿದ್ದರು.
ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಯಸ್ ಕುಂಪಲ ಸ್ವಾಗತಿಸಿ ವಂದಿಸಿದರು.


