UN NETWORKS
ದೇರಳಕಟ್ಟೆ: ದೇರಳಕಟ್ಟೆಯ ಯೇನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಮಹೇಶ್. ಎಂ. ಗೌಡ ಅವರು ಯುರೋಪಿಯನ್ ರೆಸ್ಪಿರೇಟರಿ ಸೊಸೈಟಿ ಪ್ರಾಯೋಜಕತ್ವದ ಸಂಶೋಧನಾ ಫೆಲೋಶಿಪ್ಗೆ ಆಯ್ಕೆಯಾಗಿದ್ದಾರೆ.
ಅವರು ಜರ್ಮನಿಯ ಲುಡ್ವಿಗ್ ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾಲಯ, ಮುನಿಚ್ನಲ್ಲಿ ಡಾ. ಜೊರಲ್ಡ್ ಬಗ್ಸ್ರ್ಟಾಲರ್ ಮಾರ್ಗದರ್ಶನದಲ್ಲಿ ಮೂರು ತಿಂಗಳ ಅಧ್ಯಯನ ನಡೆಸಲಿದ್ದಾರೆ. ಯೇನೆಪೊಯ ಸಂಶೋಧನಾ ಕೇಂದ್ರದ ಸಹ ಪ್ರಾಚಾರ್ಯ ಡಾ. ಯಶೋಧರ ಪಿ. ಭಂಡಾರಿ ಅವರ ಮಾರ್ಗದರ್ಶನದಲ್ಲಿ ಸಂಶೋಧಕರಾಗಿ ಶ್ವಾಸಕೋಶದ ಕಾಯಿಲೆಗೆ ಸಂಬಂಧಿಸಿದ ವಿಷಯದಲ್ಲಿ ಗಾಯವನ್ನು ಪ್ರಚೋದಿಸುತ್ತದೆ ಎಂಬ ವಿಷಯದಲ್ಲಿ ಪಿ.ಎಚ್ಡಿ ಅಧ್ಯಯನವನ್ನು ಮಾಡುತ್ತಿದ್ದಾರೆ.


