UN NETWORKS
ಉಳ್ಳಾಲ: ಆರ್ಥೋಡಾಂಟಿಕ್ ಸಲಹೆಗಾರ ಹಾಗೂ ದಂತ ವೈದ್ಯ ಡಾ. ಅರ್ಜುನ್ ನಾಯಕ್ ಅವರು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ `ಪ್ರತಿಭಾನ್ವಿತ ಯುವ ವೈದ್ಯ ಅಂತರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಸೆ. 29, 30ರಂದು ದುಬೈನಲ್ಲಿ ನಡೆಯಲಿರುವ ವಿಶ್ವ ದಂತ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರು ದೇರಳಕಟ್ಟೆ ಎ.ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ. ಯು.ಯಸ್. ಕೃಷ್ಣ ನಾಯಕ್ ಅವರ ಪುತ್ರ.


