UN NETWORKS
ಉಳ್ಳಾಲ: ಉಳ್ಳಾಲ ಭಾಗದಲ್ಲಿ ಪ್ಲಾಸ್ಟಿಕ್ ಮೊಟ್ಟೆಯೊಂದು ಆಮ್ಲೆಟ್ ಮಾಡುವ ಸಂದರ್ಭ ಪತ್ತೆಯಾಗಿದೆ ಎಂದು ಮಹಿಳೆಯೊಬ್ಬರು ಅದನ್ನು ತೋರಿಸಿರುವ ವೀಡಿಯೋ ಇದೀಗ ವಾಟ್ಸ್ಯಾಪ್ ನಲ್ಲಿ ವೈರಲ್ ಆಗಿದ್ದು, ನಾಗರೀಕರಲ್ಲಿ ಆತಂಕ ಸೃಷ್ಟಿಸಿದೆ.
ಮೊಟ್ಟೆಯೊಂದನ್ನು ಆಮ್ಲೇಟ್ ಮಾಡುವ ಸಂದರ್ಭ ಅದು ಪ್ಲಾಸ್ಟಿಕ್ ಮಿಶ್ರಿತದಂತೆ ಕಂಡುಬರುತ್ತದೆ. ಅಡುಗೆ ಮನೆಯಲ್ಲಿ ಸೆರೆಹಿಡಿಯಲಾದ ವೀಡಿಯೋದಲ್ಲಿ ಮುಸ್ಲಿಂ ಮಲಯಾಳಿ ಭಾಷೆಯಲ್ಲಿ ಮಾತನಾಡುವ ಮಹಿಳೆ ಅದನ್ನು ತೋರಿಸಿ ಉಳ್ಳಾಲದ ಅಂಗಡಿಯಿಂದ ತಂದಿರುವ ಮೊಟ್ಟೆಯಲ್ಲಿ ತಯಾರಿಸಲಾಗಿದೆ. ಇದೊಂದು ಪ್ಲಾಸ್ಟಿಕ್ ಮೊಟ್ಟೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಆದರೆ ಇದೀಗ ಅಂತಹದ್ದೇ ಮೊಟ್ಟೆ ಮನೆಗೆ ತಲುಪಿದೆ. ಎಲ್ಲರೂ ಈ ನಿಟ್ಟಿನಲ್ಲಿ ಜಾಗರೂಕರಾಗಿ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿರುವ ವೀಡಿಯೋ ವೈರಲ್ ಆಗಿದೆ. ಶನಿವಾರದಿಂದ ಮಹಿಳೆಯೊಬ್ಬರು ಮಾಡಿರುವ ವೀಡಿಯೋ ವಾಟ್ಸ್ಯಾಪ್ ಮೂಲಕ ಹರಿದಾಡುತ್ತಿದೆ. ಆದರೆ ಈ ಕುರಿತು ಉಳ್ಳಾಲ ನಗರಸಭೆಯ ಆರೋಗ್ಯ ನಿರೀಕ್ಷಕರಿಗೆ ಯಾವುದೇ ರೀತಿಯ ಮಾಹಿತಿಯೂ ಬಂದಿಲ್ಲ. ಅಲ್ಲದೆ ಯಾವ ಮನೆಯಲ್ಲಿ ದೊರೆತಿದೆ ಅನ್ನುವ ಕುರಿತು ಸ್ಪಷ್ಟ ಮಾಹಿತಿಯೂ ಇಲ್ಲ.


