UN NETWORKS
ಜಪ್ಪು : ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ನಿರ್ಮಾಣ ತಕ್ಷಣ ಮಾಡಬೇಕೇಂದು ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಮತ್ತು ನಿರ್ಮಲ ನಗರ ನಾಗರಿಕ ಹಿತರಕ್ಷಣಾ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ಜಪ್ಪು ಮಹಕಾಳಿಪಡು ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಜೆಪ್ಪು ಮಾತನಾಡಿ, ಮನಪಾ ಸ್ಮಾರ್ಟ್ ಸಿಟಿ ಕನಸು ಹೊತ್ತುಕೊಂಡಿದ್ದರೂ ಮಂಗಳೂರಿನ ಹೃದಯಭಾಗ ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ. ಅಲ್ಲದೇ ಜಪ್ಪು ಮಹಾಕಾಳಿಪಡ್ಲು ರೈಲ್ವೆ ಕೆಳ ಸೇತುವೆ , ರೈಲ್ವೆ ಗೇಟ್ ನಿರ್ಮಾಣವಾಗದೇ ಉಳಿದಿವೆ. 10 ನಿಮಿಷಕ್ಕೊಂದರಂತೆ ರೈಲು ಸಂಚಾರ ಇಲ್ಲಿನ ರಸ್ತೆಗೆ ಅಡ್ಡವಾಗಿ ಸಂಚರಿಸುವುದರಿಂದ ತೊಕ್ಕೊಟ್ಟು, ತಲಪಾಡಿ, ದೇರಳಕಟ್ಟೆ, ಕೊಣಾಜೆ ಮತ್ತು ಕೇರಳಕಡೆಯಿಂದ ಬರುವ ವಾಹನ ಸವಾರರು, ಪ್ರಯಾಣಿಕರು ರೈಲ್ವೆ ಗೇಟ್ ಅಕ್ಕಪಕ್ಕ ಸರದಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆ ಪರಿಹರಿಸುವ ಕೆಲಸ ತಕ್ಷಣ ಆಗಬೇಕು. ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ 21 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಮನಾಪದ ಅನುದಾನಕ್ಕೆ ಕಾಯುತ್ತಿದೆ. ಆದರೆ ಮನಪಾ ಅನುದಾನ ಕೊರತೆಯ ಪಟ್ಟಿ ಮುಂದಿಟ್ಟು ರೈಲ್ವೆ ಇಲಾಖೆಯ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದರು.
ತುಳುನಾಡ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಡಬ, ಸಿರಾಜ್ ಅಡ್ಕರೆ, ಭಾಸ್ಕರ ಕುಂಬ್ಳೆ, ರೈಲ್ವೆ ಸಮಿತಿ ಸದಸ್ಯ ಹಸನ್ಬಾವಾ, ಆನಂದ ಅಮೀನ್ ಅಡ್ಯಾರ್, ಜ್ಯೋತಿಕಾ ಜೈನ್, ದವಿ ಶೆಟ್ಟಿ ಮಾಡೂರು, ಅಶೋಕ್, ಶಿವಪ್ರಸಾದ್, ತನ್ವೀರ್, ಕಿಶೋರ್, ರಾಜ್ ಗೋಪಾಲ್ ಉಪಸ್ಥಿತರಿದ್ದರು.


