ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಐತಿಹಾಸಿಕ ಪುಣ್ಯ ಕ್ಷೇತ್ರ ಉಳ್ಳಾಲದ ಸಯ್ಯಿದ್ ಮದನಿ ದರ್ಗಾದಲ್ಲಿ ಎ. 2ರಂದು ಆರಂಭಗೊಂಡ 20ನೆಯ ಪಂಚವಾರ್ಷಿಕ ಹಾಗೂ 423ನೆಯ ವಾರ್ಷಿಕ ಉರೂಸ್ ನೇರ್ಚೆಯು ಶನಿವಾರ ಮದನಿ ಮೌಲೂದ್ ಹಾಗೂ ಸಂದಲ್ ಮೆರವಣಿಗೆಯೊಂದಿಗೆ ಶನಿವಾರ ಸಂಪನ್ನಗೊಂಡಿತು.
ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್. ಹಂಝ ಅವರ ಅಧ್ಯಕ್ಷತೆಯಲ್ಲಿ ಅರೆಬಿಕ್ ಕಾಲೇಜು, ದಅವಾ ಕಾಲೇಜು ಹಗೂ ಹಿಫುಲ್ ಕಾಲೇಜು ವಿದ್ಯಾರ್ಥಿಗಳ ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. 
ಸ್ವಬಾಹುರಿಫಾಯಿ ಬಾಗ್ದಾದಿ ಆವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅವರ ನೇತೃತ್ವದಲ್ಲಿ ಸಂದಲ್ ಮೆರವಣಿಗೆಯೊಂದಿಗೆ ಜರುಗಿತು.
ಉರೂಸ್ ಪ್ರಯುಕ್ತ ಎ. 25ರಂದು ಅರಂಭವಾದ ಅನ್ನದಾನ ಎ. 26ರ ಸಂಜೆ 6ಗಂಟೆ ತನಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕಾರ್ಯದರ್ಶಿ ಅಶ್ರಫ್ ಬಳ್ಳಾರಿ, ಫಾರೂಕ್ ಮಾರ್ಗತ್ತಲೆ, ಕೋಶಾಧಿಕಾರಿ ಮಹಮ್ಮದ್ ಹಾಜಿ ಬಿಲಾಲ್, ಲೆಕ್ಕ ಪರಿಶೋಧಕ ಅಬ್ದುಲ್ ಹಮೀದ್ ಕಲ್ಲಾಪು, ಸದಸ್ಯರಾದ ಹನೀಫ್ ಚೆಂಬುಗುಡ್ಡೆ, ಉಮ್ಮರಬ್ಬ ಕಲ್ಲಾಪು, ಆಬ್ದುಲ್ ರವೂಫ್ ಮದನಿ ನಗರ, ಚಾರಿಟೇಬಲ್ ಟ್ರಸ್ಟ್‍ನ ಉಪಾಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ ಮುಕ್ಕಚ್ಚೇರಿ, ಅರೆಬಿಕ್ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಝಿಯಾದ್ ತಂಙಳ್, ಕೋಶಾಧಿಕಾರಿ ತಂಝಿಲ್ ಕೋಟೆಪುರ ಉಪಸ್ಥಿತರಿದ್ದರು.
ಉರೂಸ್ ಕಮಿಟಿ ಮಾಧ್ಯಮ ಸಮಿತಿ ಸಂಚಾಲಕ ಆರ್.ಕೆ. ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.
ಸಂದಲ್ ಮೆರವಣಿಗೆ ಉಳ್ಳಾಲ ದರ್ಗಾದಿಂದ ಹೊರಟು ಉಳ್ಳಾದಾದ್ಯಂತ ಸಾಗಿತು.















