UN NETWORKS
ಮಂಗಳೂರು: ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಮಂಗಳೂರು ಘಟಕದ ರೇಷ್ಮಾ ಅವರನ್ನು ಗೃಹರಕ್ಷಕದಳದ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಸನ್ಮಾನಿಸಿದರು.
ಬೆಂಗಳೂರಿನ ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ಆರು ದಿನಗಳ ಕಾಲ ನಡೆದ ಗೃಹರಕ್ಷಕಿಯರ “ನಿಸ್ತಂತು ಚಾಲನಾ ತರಬೇತಿ” ಪಡೆದಿದ್ದಾರೆ. ಉಪಸಮಾದೇಷ್ಟ ರಮೇಶ್, ಮಾರ್ಕ್ಶೇರಾ, ಹಿರಿಯ ಗೃಹರಕ್ಷಕ ಸುರೇಶ್ ಶೇಟ್ ಮತ್ತು ಮಂಗಳೂರು ಘಟಕದ ಗೃಹರಕ್ಷಕರು ಗೃಹರಕ್ಷಕಿಯರು ಉಪಸ್ಥಿತರಿದ್ದರು.


