UN NETWORKS
ಮುಡಿಪು: ಮಜ್ಲೀಸ್ ಇಜ್ಯು ಪಾರ್ಕ್ ಮುಡಿಪುನಲ್ಲಿ ಮಾಸಿಕ ನಡೆಸಿ ಬರುವ ಸಖಾಫಿಯ್ಯಾ ರಾತೀಬ್ ಮಜ್ಲಿಸ್ ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ಆಸ್ಸಖಾಫ್ ತಂಙಳ್ ಅದೂರು ನೇತ್ರತ್ವದಲ್ಲಿ ನಡೆಯಿತು.
ಸಂಸ್ಥೆಯ ಮ್ಯಾನೇಜರ್ ಜಲಾಲುದ್ದೀನ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶವಾದ ಮುಡಿಪುನಲ್ಲಿ ಎಜ್ಯು ಪಾರ್ಕ್ ಎಂಬ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಮುಡಿಪು ಪರಿಸರ ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ಯಿಂದ ಬೆಳಗಿದೆ. ಮುಂದಿನ ದಿನಗಳಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಿದರು.
ಕೌಸರ್ ಸಖಾಫಿ ಪನ್ನೂರು ಮುಖ್ಯ ಪ್ರಭಾಷಣ ಗೈದು ಮಾತನಾಡಿ ಸೈಯದ್ ತಂಙಳ್ ಕುಟುಂಬವನ್ನು ಗೌರವಿಸಿ. ಅವರು ಪ್ರವಾದಿ ರಕ್ತ ಸಂಬಂಧಿಕರು ಎಂಬುದನ್ನು ಮರೆಯದೆ ಅವರಿಗೆ ಧಾರ್ಮಿಕ ಲೌಕಿಕ ಜ್ಞಾನ ಇಲ್ಲದಿದ್ದರೂ ಅವರು ಯಾವ ಸ್ಥಿತಿಯಲ್ಲಿ ಇದರು ಅವರನ್ನು ಗೌರವಿಸಿ. ಸೈಯದ್ ಗಳನ್ನು ಗೌರವಿಸುವವರು ಮಾತ್ರ ಮುಸಲ್ಮಾನರು ಎಂದು ಹೇಳಿದರು.
ಎಸ್.ಎಂ ಎ ಮುಡಿಪು ವಲಯಾಧ್ಯಕ್ಷ ಅಬೂಬಕ್ಕರ್, ಮಂಞಪಾರ ಸಮೀರ್ ಸಖಾಫಿ, ನ್ಯಾಯವಾದಿ ಉಬೈದ್ ಸಖಾಫಿ, ಪುತ್ತುಬಾವ ಹಾಜಿ, ಬಾಳೇಪುಣಿ ಗ್ರಾ.ಪಂ ಉಪಾಧ್ಯಕ್ಷ ಬಶೀರ್ ಸಾಜಿಗಾರ್, ಉದ್ಯಮಿ ಮುಹಮ್ಮದ್ ಸಾಲಿಮಾರ್, ಮುಹಮ್ಮದ್ ಹಾಜಿ ಪ್ಯೋಯ್ಯತ್ತಬೈಲ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಎ.ಇ ಅಬ್ದುರ್ರಹ್ಮಾನ್ ರಝ್ವಿ ಸ್ವಾಗತಿಸಿದರು. ಜಮಾಲ್ ಸಖಾಫಿ ಮುದುಂಗಾರುಕಟ್ಟೆ ವಂದಿಸಿದರು.


