UN NETWORKS
ಕೊಲ್ಯ: ಸೌಂದರ್ಯ ಓಂ ಸಾಯಿ ಸೌಹಾರ್ದ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಕೊಲ್ಯದಲ್ಲಿ ಶಾರಾದಾ ಬಸ್ಸು ತಂಗುದಾಣ ನಿರ್ಮಾಣ ಮಾಡಿದ್ದು ಸಾರ್ವಜನಿಕ ಪ್ರಯಾಣಿಕರ ಸಮಸ್ಯೆಯನ್ನು ಗಮನಿಸಿ ಈ ಕೊಡುಗೆ ನೀಡಲಾಗಿದೆ. ಇದರ ಸದುಪಯೋಗ ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ ಎಂದು ಉದ್ಯಮಿ ಸೌಂದರ್ಯ ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ನಾಗಬ್ರಹ್ಮಸ್ಥಾನ ಧರ್ಮದರ್ಶಿ ಭಾಸ್ಕರ ಐತಾಳ, ಬ್ಯಾಂಕ್ ನಿರ್ದೇಶಕ ಸದಾಶಿವ ಉಳ್ಳಾಲ, ಸೋಮೇಶ್ವರ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಜಿ.ಪಂ. ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕ್ ಪಂಚಾಯತ್ ಸದಸ್ಯ ರಾಮಚಂದ್ರ ಕುಂಪಲ ಉಪಸ್ಥಿತರಿದ್ದರು.
ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಬಂಗೇರ, ಅಧ್ಯಕ್ಷ ಯಶೋಧರ ಕೊಲ್ಯ, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ರಮೇಶ್ ಕೊಲ್ಯ, ಎಡ್ವರ್ಡ್ ಲೋಬೋ, ಪ್ರಕಾಶ್ ಎಚ್. ಚಂದ್ರಶೇಖರ್ ಉಚ್ಚಿಲ್, ದೇವದಾಸ್ ಕೊಲ್ಯ, ಆದರ್ಶ ಮಿತ್ರಮಂಡಳಿಯ ಅಧ್ಯಕ್ಷ ಸಂತೋಷ್ ಕೊಲ್ಯ, ಶಾರದಾ ಮಹಿಳಾ ಮಂಡಳಿಯ ಅಧ್ಯಕ್ಷೆ ತುಳಸಿ ವಿಶ್ವನಾಥ್, ಸೌಂದರ್ಯ ಸಹಕಾರಿ ಸಂಘದ ಸಿಇಒ ಪೂರ್ಣಿಮಾ, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.
ಕ್ಷಿಪ್ರಗತಿಯಲ್ಲಿ ಬಸ್ಸು ನಿಲ್ದಾಣದ ಕಾಮಗಾರಿ ನಿರ್ವಹಿಸಿದ ಮಹೇಶ್ ಹಾಗೂ ಶಶಿಕಾಂತ್ ಕೊಲ್ಯ ಇವರನ್ನು ಅಭಿನಂದಿಸಲಾಯಿತು. ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.


