UN NETWORKS
ಉಳ್ಳಾಲ: ಹಿರಾ ಮಹಿಳಾ ಕಾಲೇಜು ಬಬ್ಬುಕಟ್ಟೆ, ಇಲ್ಲಿನ ವಾಣಿಜ್ಯ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗದಿಂದ ಕೈಗಾರಿಕಾ ಭೇಟಿಯನ್ನು ತೃತೀಯ ಬಿ.ಎ, ಮತ್ತು ಬಿ.ಕಾಂ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿನಿಯರು ಬೈಕಂಪಾಡಿಯಲ್ಲಿರುವ ಕಲ್ಬಾವಿ ಕ್ಯಾಶ್ಯೂಇಂಡಸ್ಟ್ರೀಸ್ ಮತ್ತು ಕುಲಶೇಖರದ ಹಾಲಿನ ಡೈರಿಗೆ ಭೇಟಿ ನೀಡಿದರು. ಮಾರ್ಗದರ್ಶಕರ ಸಹಾಯದಿಂದ ವಿವಿಧ ವಿಭಾಗಗಳಲ್ಲಿ ಉತ್ಪನ್ನಗೊಳ್ಳುವ ವಸ್ತುಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿನಿಯರು ಪಡೆಯುವಂತಾಯಿತು. ಭೇಟಿ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅರ್ಚನ, ಮುಬೀನ, ಪ್ರಮಿಳ ಕೆ. ಮತ್ತು ಶಾಂತಿ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿಯಾದ ಉಮ್ಮರ್ ಬಾವ ಅವರು ಉಪಸ್ಥಿತರಿದ್ದರು.


