UN NETWORKS
ಕೋಟೆಕಾರು: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ವ್ಯಾಪ್ತಿಗೆ ಒಳಪಡುವ ಸುಮಾರು 100 ನವೋದಯ ಸಂಘಗಳು, ಸ್ವ-ಸಹಾಯ ಸಂಘಗಳ ನಿರ್ವಹಣೆಯ ಬಗ್ಗೆ ಒಂದು ದಿನದ ಮಾಹಿತಿ ತರಭೇತಿ ಶಿಬಿರ ಕಾರ್ಯಕ್ರಮವು ಬುಧವಾರದಂದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕ ಲೋಕಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು .ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಸ್ವ-ಸಹಾಯ ಸಂಘಗಳ ಮೇಲ್ವಿಚಾರಕ ಹರಿನಾಥ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಸುದರ್ಶನ್ ಕಾರ್ಯಕ್ರಮದಲ್ಲಿ ತರಭೇತಿ ನೀಡಿದರು.
ರುಕ್ಮಿಣಿ,ಪದ್ಮಾ,ರೇಣುಕಾ,ಗಾಯತ್ರಿ,ರಜತ,ಪವಿತ್ರ,ಶೋಭಾ,ವಂದನ,ಸುಷ್ಮಾ,ದಿವ್ಯಾ,ಪವಿತ್ರ,ಎವರೆಸ್ಟ್ ಅವರನ್ನು ಲೆಕ್ಕಪರಿಶೋಧಕರಾಗಿ ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.ಮಾಧವಿ ಆಚಾರ್ಯ ಸ್ವಾಗತಿಸಿದರು. ರೇಶ್ಮಾ ಎಸ್ ಕಾರ್ಯಕ್ರಮವನ್ನು ನಿರೂಪಿಸಿ ಮೋಹಿನಿ ವಂದಿಸಿದರು


