UN NETWORKS
ಪಂಪವೆಲ್: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಇಂದು ಪಂಪವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಮತ್ತು ರಸ್ತೆ ಅವೈಜ್ಞಾನಿಕ ವಿರುದ್ಧ ಇಂದು ಪಂಪವೆಲ್ ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಇದೇ ಸಂದರ್ಭದಲ್ಲಿ ಯುವ ಜನತಾದಳದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಮತ್ತು ಜಿಲ್ಲಾ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗುವುದು ಕೇಳಿಬಂತು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಜನತಾದಳದ ಆಕ್ಷಿತ್ ಸುವರ್ಣ ಅವರು ಜಿಲ್ಲೆಯ ಸಂಸದರು ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಕೇವಲ ಸುಳ್ಳು ಆಶ್ವಾಸನೆ ಮುಖಾಂತರ ಜನರಿಗೆ ಕಣ್ಣಿಗೆ ಮೋಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 7-8 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಇಲ್ಲಿಯವರೆಗೂ ಕೂಡ ಪೂರ್ಣಗೊಳ್ಳದೇ ಅನೇಕ ಸಾವು ನೋವಿಗೆ ಕಾರಣವಾಗಿರುವ ಸಂಸದರನ್ನು ಈ ಬಾರಿ ತಿರಷ್ಕರಿಸಬೇಕು ಎಂದು ತಿಳಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಬಿ.ಮಹಮ್ಮದ್ ಕುಂಞ ವಿಟ್ಲ ಈ ಮೇಲ್ಸೇತುವೆಯಿಂದ ಅನೇಕ ಸಾವುಗಳು ಸಂಭವಿಸಿದ್ದು ಇದಕ್ಕೆ ನೇರಹೊಣೆ ನಳಿನ್ ಕುಮಾರ್ ಕಟೀಲ್. ನೇರ ಹೊಣೆ ಕೇಂದ್ರ ಸರ್ಕಾರ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ರಾಮ್ ಗಣೇಶ್, ರಾಜ್ಯ ನಾಯಕರುಗಳಾದ ಗೋಪಾಲಕೃಷ್ಣ ಅತ್ತಾವರ, ಫೈಜಲ್, ಜಿಲ್ಲಾ ನಾಯಕರಾದ ಸುಮತಿ ಹೆಗ್ಡೆ,ರಮೇಶ್, ಎಸ್.ಸುಶೀಲ್ ನೋರೋನ, ಶ್ರೀ ನಾಥ್ ರೈ, ರತ್ನಾಕರ್ ಸುವರ್ಣ,ಲತ್ತಿಫ್,ಇಝಾ, ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಗೌಡ, ಮಂಗಳೂರು ದಕ್ಷಿಣ ಯುವ ಅಧ್ಯಕ್ಷ ಮಹಮ್ಮದ್ ರಜಾಕ್, ಉತ್ತರ ಅಧ್ಯಕ್ಷ ರತೀಶ್ ಕರ್ಕೇರ, ಜಿಲ್ಲಾ ಯುವ ನಾಯಕರಾದ ಲಿಖಿತ್ ರಾಜ್, ಮಹಮ್ಮದ್ ಆಸೀಫ್, ಹಿತೇಶ್ ರೈ, ಫೈಜಲ,ಭರತ್ ಹೆಗ್ಡೆ,ಕಿಶೋರ್ ಶೆಟ್ಟಿ,ಶರೀಫ್ ಪುತ್ತೂರು,ಸತ್ಯನಾರಯಣ.ಕಲೀಲ್.ಕಲದಂರ್.ಮುಸಾಪರ್ಕ,ಲದೀಪ್,ಅನೀಶ್,ಕೌಶಿಕ್ ಉಪಸ್ಥತಿ ಇದ್ದರು.


