UN NETWORKS
ಸೋಮೇಶ್ವರ: ಸೋಮೇಶ್ವರ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.1 ರಂದು ಆಚರಿಸಲು ಉದ್ದೇಶಿಸಲಾದ ಶತಮಾನೋತ್ಸವದ ಸಮಿತಿ ರಚನೆ ಇತ್ತೀಚೆಗೆ ಶಾಲೆಯಲ್ಲಿ ನಡೆದ ಸಭೆಯಲ್ಲಿ ನಡೆಯಿತು. ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಎನ್.ಜಿ.ಮೋಹನ್ ಆಯ್ಕೆಯಾದರು.
ಪದ್ಮನಾಭ ತಂತ್ರಿ, ಗೋಪಾಲಕೃಷ್ಣ ಉಚ್ಚಿಲ್, ಡಾ.ಜೆ.ಎನ್. ಭಟ್ , ರೇವತಿ.ಡಿ.ಉಚ್ಚಿಲ್, ಲಕ್ಷ್ಮೀ .ಡಿ.ಉಚ್ಚಿಲ್, ಸತೀಶ್ ಕಾರಂತ್, ಕೃಷ್ಣಪ್ಪ ಉಚ್ಚಿಲ್, ಚಂದ್ರಶೇಖರ್ ಉಚ್ಚಿಲ್, ಇಸ್ಮಾಯಿಲ್, ಮಹಮ್ಮದ್ ಆಲಿ, ರಾಜೇಶ್ ಉಚ್ಚಿಲ್ ಇವರನ್ನು ಗೌರವಾಧ್ಯಕ್ಷರುಗಳಾಗಿ, ಕಾರ್ಯಾಧ್ಯಕ್ಷರಾಗಿ ರಾಘವ.ಆರ್.ಉಚ್ಚಿಲ್, ಉಪಾಧ್ಯಕ್ಷರುಗಳಾಗಿ ಯು.ಹೆಚ್.ದಾಮೋದರ್, ಸುಕನ್ಯಾ ಉಚ್ಚಿಲ್, ವಾಣಿ ಲೋಕಯ್ಯ, ರೋಹಿತಾಶ್ವ, ರಘು ಉಚ್ಚಿಲ್. ಅಹ್ಮದ್ ಹುಸೈನ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಬೆಳ್ಚಪ್ಪಾಡ ಅಡ್ಕ, ಜೊತೆ ಕಾರ್ಯದರ್ಶಿಗಳಾಗಿ ವಿಜಯ ಕುಮಾರ್ ಎನ್.ಉಚ್ಚಿಲ್, ನಾರಾಯಣ ಸಿ.ಉಚ್ಚಿಲ್, ಮನೋಜ್ ಕೆ.ಉಚ್ಚಿಲ್, ಸಚಿನ್ ಎಸ್.ಉಚ್ಚಿಲ್, ಯಶವಂತಿ, ಚಂದ್ರಿಕಾ ರೈ, ಪ್ರಫುಲ್ಲಾ ಪಂಡಿತ್, ಪ್ರವೀಣ್ ಬಸ್ತಿ , ಕೋಶಾಧಿಕಾರಿಯಾಗಿ ಹರೀಶ್ .ಟಿ.ಉಚ್ಚಿಲ್ ಹಾಗೂ 60 ಮಂದಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.




