UN NETWORKS
ಉಳ್ಳಾಲ: ಪಾದಚಾರಿ ವ್ಯಕ್ತಿಯೋರ್ವರಿಗೆ ಬಸ್ಸು ಢಿಕ್ಕಿ ಹೊಡೆದು ಸಾವನ್ನಪಿರುವ ಘಟನೆ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಅಪರಿಚಿತ ವ್ಯಕ್ತಿಯಾಗಿರುವ ಮೃತರು ಸುಮಾರು 60 ವರ್ಷ ಪ್ರಾಯದವರು ಎಂದು ಅಂದಾಜಿಸಲಾಗಿದೆ. ಕೇರಳ ಭಾಗದಿಂದ ಬಂದವರು ಹೆಚ್ಚಾಗಿ ತೊಕ್ಕೊಟ್ಟು ಬಸ್ಸು ನಿಲ್ದಾಣಗಳಲ್ಲೇ ಉಳಿಯುತ್ತಿದ್ದರು. ಮಂಗಳೂರಿನಿಂದ ಉಳ್ಳಾಲ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು ನಿಲ್ದಾಣದೊಳಕ್ಕೆ ಪ್ರವೇಶಿಸುತ್ತಿದ್ದಂತೆ, ರಸ್ತೆ ಅಡ್ಡದಾಟುವ ಸಂದರ್ಭ ಅಪಘಾತ ಸಂಭವಿಸಿದೆ. ಸಂಬಂಧಿಕರು ಇದ್ದಲ್ಲಿ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.


