UN NETWORKS
ಮಂಗಳೂರು: ಹಿಂದೂ ಯುವ ಸೇನಾ ಆಶ್ರಯದಲ್ಲಿ ನಡೆಯುವ ಮಂಗಳೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ 25ನೇ ಭಾರಿಗೆ ಕಲ್ಪನಾ ಸ್ವೀಟ್ಸ್ ನ ಪಾಲುದಾರ ಶಶಿಕಾಂತ್ ನಾಗ್ವೇಕರ್ ಆಯ್ಕೆಯಾಗಿದ್ದಾರೆ.ಹಿಂದೂ ಯುವ ಸೇನಾ ಆಶ್ರಯದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಚರಿಸಲ್ಪಡುವ 26ನೇ ವರ್ಷದ ಮಂಗಳೂರು ಗಣೇಶೋತ್ಸವ ಸಮಿತಿಯ ಮಹಾಸಭೆಯು ಹಿಂದೂ ಯುವ ಸೇನಾ ಅಧ್ಯಕ್ಷ ಯಶೋದರ ಚೌಟ ಇವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ಭಾಸ್ಕರಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಚೌಟ ಪದವು, ಕೋಶಾಧಿಕಾರಿಯಾಗಿ ಸುರೇಶ್ ಶೆಟ್ಟಿ ಕೊಟ್ಟಾರ ಕ್ರಾಸ್, ಉಪಾದ್ಯಕ್ಷರುಗಳಾಗಿ ಉಮೇಶ್ ಪೈ, ರಾಜೇಂದ್ರ ಶೆಣೈ, ಧರ್ಮೇಂದ್ರ ಎಂ.ಪಿ, ವಸಂತ್ ಉರ್ವಸ್ಟೋರ್, ಶುಭಕರ ಚೌಟ ಎಕ್ಕೂರು, ಶ್ರೀನಿವಾಸ್ ಎಕ್ಕೂರು, ಕೊರಗಪ್ಪ ಶೆಟ್ಟಿ ಆಕಾಶಭವನ, ಶರತ್ ಮಂಕಿಸ್ಟಾಂಡ್, ಯಾಧವ ಕುಂದರ್ ವಾಮಂಜೂರ್, ಲಕ್ಷ್ಮಣ ಜೋಗಿ ಮೂಡುಶೆಡ್ಡೆ, ಕಿರಣ್ ರೈ ಬಜಾಲ್, ಪಮ್ಮಿ ಕೊಡಿಯಾಲ್ ಬೈಲ್, ಸುರೇಶ್ ಹೊಳ್ಳ ಕುಡುಂಬೂರ್, ಸುರೇಶ್ ಕೆಮ್ಮಟೆ, ಕಾರ್ಯದರ್ಶಿಗಳಾಗಿ ಸುಕುಮಾರ್ ಸುರತ್ಕಲ್, ಲೋಕೇಶ್ ಕುತ್ತಡ್ಕ, ನಾಗೇಶ್ ಎಕ್ಕೂರು, ಕಿರಣ್ ಕುಂಪಲ, ಹರೀಶ್ ಬಜಾಲ್, ಲೋಕೇಶ್ ಕೆ.ಉಳ್ಳಾಲ್, ರವಿಚಂದ್ರ ಎಕ್ಕೂರು, ಪವನ್ ಮಂಕಿಸ್ಟಾಂಡ್, ಪುಷ್ಪರಾಜ್ ಬಂಟ್ವಾಳ, ಪ್ರಸಾದ್ ಸುವರ್ಣ ಅಡ್ಯಾರ್ ಪದವು, ಸಂದೀಪ್ ನಂದನಪುರ, ಪ್ರವೀಣ್.ಎಸ್.ಕುಂಪಲ, ಪದ್ಮನಾಭ ಅಂಚನ್ ಕಕ್ಕೆಬೆಟ್ಡು, ಭಾಸ್ಕರ ಕೋಟ್ಯಾನ್ ಕೃಷ್ಣಾಪುರ, ಸುರೇಶ್ ವಿಟ್ಲ, ಮಿಥುನ್ ಬಿ.ಸಿ.ರೋಡ್, ಹೇಮ ಪ್ರಕಾಶ್ ಹೆಗ್ಡೆ. ಲೆಕ್ಕ ಪರಿಶೋಧಕರಾಗಿ ಕೇಶವ ಸಾಲ್ಯಾನ್ ಆಯ್ಕೆಯಾದರು.
ಹಿಂದೂ ಯುವ ಸೇನಾ ಕೇಂದ್ರೀಯ ಮಂಡಳಿಯ ವಿವಿಧ ಶಾಖೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು 150 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.


