UN NETWORKS
ಉಳ್ಳಾಲ: ಎಸ್ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಆಂತರಿಕ ಚುನಾವಣೆ ದೇರಳಕಟ್ಟೆ ಬಿ.ಸಿ.ಸಿ.ಹಾಲ್ನಲ್ಲಿ ನಡೆದಿದ್ದು ನೂತನ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಅಬ್ಬಾಸ್ ಕಿನ್ಯ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ಭಾಗವಹಿಸಿದ್ದ ಎಸ್.ಡಿ.ಎ.ಯು. ರಾಜ್ಯಾಧ್ಯಕ್ಷ ಅಬ್ದುಲ್ ಜಲೀಲ್ ಕ್ರಷ್ಣಾಪುರ ಹಾಗೂ ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟಿದ್ದು ಒಂಭತ್ತು ಜನರ ನೂತನ ಕಾರ್ಯಕಾರಿ ಸಮಿತಿ ನಡೆಸಲಾಯಿತು.
ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಕೋಡಿಜಾಲ್, ಉಪಾಧ್ಯಕ್ಷರಾಗಿ ಸುಲೈಮಾನ್ ಉಸ್ತಾದ್ ಪುದು, ಜೊತೆ ಕಾರ್ಯದರ್ಶಿಯಾಗಿ ಝಹೂರ್ ತುಂಬೆ, ಖಜಾಂಜಿಯಾಗಿ ಮುಹಮ್ಮದ್ ಝಾಹೀದ್ ಮಲಾರ್, ಸಮಿತಿ ಸದಸ್ಯರಾಗಿ ರವೂಫ್ ಉಳ್ಳಾಲ್, ಇರ್ಷಾದ್ ಅಜಿನಡ್ಕ, ಮುಹಮ್ಮದ್ ಯು.ಬಿ., ಹಾರೀಷ್ ಮಲಾರ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಜಿಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಸೀರ್ ಸಜಿಪ, ಎಸ್.ಡಿ.ಪಿ.ಐ. ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ನೌಷದ್ ಕಿನ್ಯ, ಹಾಗೂ ನೂತನವಾಗಿ ಆಯ್ಕೆಗೊಂಡ ಪಕ್ಷದ ಗ್ರಾಮ ಸಮಿತಿ, ವಲಯ ಸಮಿತಿ, ನಗರ ಸಭಾ ಸಮಿತಿ ಹಾಗೂ ಪಟ್ಟಣ ಪಂಚಾಯತ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


