UN NETWORKS
ಮಂಗಳೂರು: ನಗರದ ಉರ್ವ ಮಾರಿಗುಡಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರೆಂಬ ಆರೋಪದಲ್ಲಿ ನಾಲ್ವರು ಯುವಕರನ್ನು ಉರ್ವ ಪೊಲೀಸರು ಬಂಧಿಸಿ, ಬಂಧಿತರಿಂದ ಒಟ್ಟು 1.5 ಕಿ.ಗ್ರಾಂ ಗಾಂಜಾ, 4 ಮೊಬೈಲ್ ಫೋನ್ ಹಾಗೂ ನಗದು ಸೇರಿದಂತೆ ಒಟ್ಟು 55,000 ರೂ. ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಉರ್ವ ಮಾಡರ್ನ್ ರೈಸ್ಮಿಲ್ ಬಳಿಯ ನಿವಾಸಿ ಮಹೇಶ್ ಯಾನೆ ಮಾಚ (24), ಮಠದಕಣಿ, ಬೊಕ್ಕಪಟ್ಣ ರಸ್ತೆ ನಿವಾಸಿ ರಿತೇಶ್ ಯಾನೆ ರೀತು (20), ಉರ್ವ ಲಾಂಗ್ ಲೇನ್ ನಿವಾಸಿ ಸುದರ್ಶನ್ ಎಂ. ಯಾನೆ ಸುಧಾ (24) ಹಾಗೂ ಅಶೋಕನಗರ ನಿವಾಸಿ ರಿತೇಶ್ ವಿ. (21) ಎಂದು ಗುರುತಿಸಲಾಗಿದೆ. ಉರ್ವ ಮಾರಿಗುಡಿ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಉರ್ವ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದರು.
ಬಂಧಿತರ ಮೇಲೆ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸ್ ಆಯುಕ್ತ ಟಿ.ಆರ್, ಸುರೇಶ್, ಡಿಸಿಪಿಗಳಾದ ಹನು ಮಂತರಾಯ ಹಾಗೂ ಉಮಾ ಪ್ರಶಾಂತ್, ಕೇಂದ್ರ ಉಪವಿಭಾಗದ ಎಸಿಪಿ ಉದಯ್ ನಾಯಕ್ ಮಾರ್ಗ ದರ್ಶನದಂತೆ ಉರ್ವ ಠಾಣೆಯ ಅಧಿಕಾರಿ ಹಾಗೂ ಸಿಬಂದಿ ಈ ಕಾರ್ಯಾಚರಣೆ ನಡೆಸಿದ್ದರು.


