UN NETWORKS
ಮಂಗಳೂರು: ಭಾರತೀಯ ಜೀವ ವಿಮಾ ನಿಗಮ ಮಂಗಳೂರು ಒಂದನೇ ಶಾಖೆಯಿಂದ ಅಭಿವೃದ್ದಿ ಅಧಿಕಾರಿಯಾಗಿ ಸೇವೆಯಿಂದ ನಿವೃತ್ತಿಯನ್ನು ಹೊಂದುತ್ತಿರುವ ಮೂಲ್ಕಿ ಕೊಲ್ನಾಡುಗುತ್ತು ಎನ್ .ವಿದ್ಯಾಧರ್ ಶೆಟ್ಟಿ ಅವರಿಗೆ ವಿದಾಯ ಕಾರ್ಯಕ್ರಮವು ಮಂಗಳೂರು ಶಾಖೆಯಲ್ಲಿ ಜರಗಿತು.
ಸುಮಾರು 35 ವರ್ಷಗಳ ಸಾರ್ಥಕ ಸೇವೆಯನ್ನು ಮುಗಿಸಿ ನಿವೃತ್ತಿ ಪಡೆಯುತ್ತಿದ್ದಾರೆ.ಶಾಖೆಯ ಹಿರಿಯ ಪ್ರಬಂಧಕ ಎ. ರವಿರಾಜ್ ಮತ್ತು ಎಲೈಸಿಯ ಸಿಬ್ಬಂದಿಗಳು , ಅಭಿವೃದ್ದಿ ಅಧಿಕಾರಿಗಳು, ವಿಮಾ ಪ್ರತಿನಿಧಿಗಳು ಅವರನ್ನು ಸನ್ಮಾನಿಸಿದರು. ಉಡುಪಿ,ಕಾಪು ಮೂಲ್ಕಿ,ಬಂಟ್ವಾಳ ಶಾಖೆಯ ಅಭಿವೃದ್ಧಿ ಅಧಿಕಾರಿಗಳಿಂದ ಸನ್ಮಾನವನ್ನು ನೆರವೇರಿಸಲಾಯಿತು.
ಅಭಿವೃದ್ದಿ ಅಧಿಕಾರಿಗಳಾದ ಅರ್ ಕೆ.ಉಪ್ಪೂರು,ಕೃಷ್ಣ ಹೆಗ್ಡೆ ಕಾರ್ಯಕ್ರಮನಿರ್ವಹಿಸಿ ಆರ್.ರಾಧಾಕೃಷ್ಣ ಅವರು ಕವಿತಾ ವಾಚನ ನಡೆಸಿದರು. ಸಿಬ್ಬಂದಿಗಳಾದ ಸೀತಾ ಲಕ್ಷ್ಮೀ ಅವರ ಪ್ರಾರ್ಥನೆಯೊಂದಿಗೆ, ಕಾರ್ಯಕ್ರಮ ನಿರ್ವಹಣೆಯನ್ನು ಜೋಯ್ಸಿ ಡೇಸಾ ನೆರವೇರಿಸಿ,ಶುಭಾಕರ ಅವರು ವಂದಿಸಿದರು.


