UN NETWORKS
ಮಂಗಳೂರು: ಮಂಗಳೂರಿನಲ್ಲಿ ಶ್ರೀ ರಾಮಕೃಷ್ಣ ಮಿಶನ್ ವತಿಯಿಂದ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾದ ಶುಚಿತ್ವಕ್ಕಾಗಿ ಜಾದು ಕಾರ್ಯಕ್ರಮಕ್ಕೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಫ್ರೌಡ ಶಾಲೆ ಹಳೆಕೋಟೆಯಲ್ಲಿ ಶಾಲಾ ಮಖ್ಯ ಶಿಕ್ಷಕರಾದ ಕೆ.ಎಂ .ಕೆ ಮಂಜನಾಡಿಯವರು ಚಾಲನೆ ನೀಡಿದರು.
ಕಳೆದ ಶೈಕ್ಷಣೆಕ ವರ್ಷ ದಲ್ಲಿ ನಮ್ಮ ಶಾಲೆಯಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಚತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳು ಶಿಕ್ಷಕರೆಲ್ಲರೂ ಸಕ್ರೀಯರಾಗಿ ಭಾಗವಹಿಸಿರುವರೆಂದು ತಿಳಿಸಿದರು. ಪ್ರಸಿದ್ಧ ಜಾದುಗಾರರಾದ ಕುದ್ರೋಳಿ ಗಣೇಶ್ ತಂಡದಿಂದ ರಂಜನೀಯವಾದ ಜಾದು ಪ್ರದರ್ಶನದೊಂದಿಗೆ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ ಸ್ವಚ್ಚತೆ, ಕಸ ಪೊರಕೆಯ ಬಳಕೆ , ಕಸ ತೊಟ್ಟಿಯ ಬಳಕೆ ಹಾಗೂ 3 ಆರ್‍ಗಳ ಬಗ್ಗೆ ಮಕ್ಕಳಿಗೆ ಬಹಳ ಸ್ವಾರಸ್ಯವಾಗಿ ತಿಳಿಸಿ ಮಕ್ಕಳು ಸಂತಸ ಪಟ್ಟರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಮಹಮ್ಮದ್ ಇಸ್ಮಾಯಿಲ್ ಹಾಜಬ್ಬ, ಶಾಲೆಯಲ್ಲಿ ಸ್ವಚ್ಚತಾ ಕಾರ್ಯದ ಉಸ್ತುವಾರಿ ಶಕೀಲಾ ಹಗೂ ಶಿಕ್ಷಕರು ಉಪಸ್ಥಿತರಿದ್ದರು.


