UN NETWORKS
ಸೋಮೇಶ್ವರ : ಸರಕಾರಿ ಪ್ರೌಢಶಾಲೆ ಸೋಮೇಶ್ವರ ಉಚ್ಚಿಲ ಶಾಲೆಯ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆಯ ಪಯುಕ್ತ ಯೋಗಾಭ್ಯಾಸವನ್ನು ನಡೆಸಲಾಯಿತು.
ವಿದ್ಯಾರ್ಥಿನಿ ಅನುಷ ವಿಶ್ವಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿ ವಿಶ್ವ ಮನುಕುಲಕ್ಕೆ ಪ್ರಾಚೀನ ಭಾರತವು ನೀಡಿರುವ ಅಪೂರ್ವ ಕೊಡುಗೆಗಳಲ್ಲಿ ಯೋಗವೂ ಒಂದು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ಲೌಕಿಕ ಜ್ಞಾನಾರ್ಜನೆಗೆ ಯೋಗ ಅತೀ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸರಳ ವ್ಯಾಯಮ, ಸೂರ್ಯ ನಮಸ್ಕಾರ,ಪ್ರಾಣಾಯಾಮಗಳನ್ನು ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶೈಲಜಾ ಕೆ.ಉಳ್ಳಾಲ್ ಇವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು. ಯೋಗಾಭ್ಯಾಸವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.




