UN NETWORKS
ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರನ್ನು ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರ ಕೊಲ್ಯದ ವತಿಯಿಂದ ಅಭಿನಂದಿಸಲಾಯಿತು.
ಶ್ರೀ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಐತಾಳ್, ನಾಗಬ್ರಹ್ಮ ಸೇವಾ ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ, ಪದಾಧಿಕಾರಿಗಳಾದ ದೀಪಕ್ ಪಿಲಾರ್, ರಾಮ್ ದಾಸ್ ಶೆಟ್ಟಿ ಬೆಂಗಳೂರು, ಗಣೇಶ್ ಕೊಲ್ಯ, ರಾಮಚಂದ್ರ ಪಿಲಾರ್ , ಶೇಷಪ್ಪ ಸಾಲ್ಯಾನ್ ಮಂಜೇಶ್ವರ, ರಮೇಶ್ ಶಿವಬಾಗ್ ಉಪಸ್ಥಿತರಿದ್ದರು.


