ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ : ಹಂದಿ ಸಾಕಣೆ ಮಾಡಿ ಕೊಳೆತ ತ್ಯಾಜ್ಯ ಮತ್ತು ನೀರನ್ನು ರಸ್ತೆಗೆ ಬಿಡುವುದನ್ನು ಆಕ್ಷೇಪಿಸಿದ ವ್ಯಕ್ತಿಯ ಮೇಲೆ ಮೂವರು ಹಲ್ಲೆ ನಡೆಸಿದ ಘಟನೆ ಪಾವೂರಿನಲ್ಲಿ ಸಂಭವಿಸಿದ್ದು ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮ್ಯಾಕ್ಸಿಂ ಡಿ`ಸೋಜಾ ಎಂಬವರೇ ಹಲ್ಲೆಗೊಳಗಾದವರು, ಮೈಕಲ್ ಲೋಬೋ, ಚಾಲ್ರ್ಸ್ ಡಿ`ಸೋಜಾ, ಪ್ರಶಾಂತ್ ಡಿ`ಸೋಜಾ ಎಂಬವರು ಪಾವೂರಿನಲ್ಲಿ ಹಂದಿ ಸಾಕಣೆ ಮಾಡುತ್ತಿದ್ದು ಇದರ ಕೊಳೆತ ತ್ಯಾಜ್ಯ ಮತ್ತು ನೀರನ್ನು ದಾರಿಗೆ ಬಿಡುತ್ತಿದ್ದರು ಎನ್ನಲಾಗಿದೆ. ಇದನ್ನು ಮ್ಯಾಕ್ಸಿಂ ಅವರು ವಿರೋಧಿಸುತ್ತಿದ್ದು ಈ ದ್ವೇಷದಿಂದ ಮ್ಯಾಕ್ಸಿಂ ಅವರನ್ನು ತಡೆದು ನಿಲ್ಲಿಸಿದ ಮೂವರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಮ್ಯಾಕ್ಸಿಂ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.





