UN NETWORKS
ಉಳ್ಳಾಲ : ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಗುರುವಾರ ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನಿಗದಿಯಾಗಿದ್ದರಿಂದ ನೇರವಾಗಿ ಸೋಮೇಶ್ವರ ಉಚ್ಚಿಲಕ್ಕೆ ಆಗಮಿಸಿದರು. ಕಡಲ್ಕೊರೆತ ತಡೆಗೆ ತಾತ್ಕಾಲಿಕ ಪರಿಹಾರವಾಗಿ ತಟದಲ್ಲಿ ಅಳವಡಿಸಲಾಗಿದ್ದ ಕಲ್ಲಿನ ತಡೆಗೋಡೆ ಬಳಿ ನಿಂತು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದರು. ಕಲ್ಲಿನ ಮೇಲೇರಲು ಅವರಿಗೆ ಆಗದ ಕಾರಣ ಸ್ಥಳೀಯರು ಏಣಿಯನ್ನು ತಂದು ಕಲ್ಲಿಗೆ ತಾಗಿಸಿ ಇಟ್ಟು ಮೇಲೇರಿ ಸಮುದ್ರ ವೀಕ್ಷಿಸುವಂತೆ ತಿಳಿಸಿದರೂ ಸಚಿವರು ನಿರಾಕರಿಸಿದರು. ಕೆಲವೇ ನಿಮಿಷ ಅಲ್ಲಿದ್ದ ಸಚಿವರು ನಂತ ನೇರವಾಗಿ ಮಂಗಳೂರಿಗೆ ತೆರಳಿದರು.
ಈ ಸಂದರ್ಭ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಅಧಿಕಾರಿಗಳು ಉಪಸ್ಥಿತರಿದ್ದರು.


