UN NETWORKS
ಉಳ್ಳಾಲ: ಶ್ರೀನಾರಾಯಣ ಗುರು ಮಹಿಳಾ ಸಂಘ ಇದರ ನೂತನ ಅಧ್ಯಕ್ಷರಾಗಿ ಮೀನಾಕ್ಷಿ ಐತಪ್ಪ ಆಯ್ಕೆಯಾಗಿದ್ದಾರೆ.
ಕೊಲ್ಯ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ವಿಶಲಾಕ್ಷಿ ಜೆ., ಉಪಾಧ್ಯಕ್ಷರಾಗಿ ಚಂದ್ರಾವತಿ, ಕಾರ್ಯದರ್ಶಿಯಾಗಿ ರೇವತಿ ವಿಶ್ವನಾಥ, ಉಪ ಕಾರ್ಯದರ್ಶಿಯಾಗಿ ಶಶಿಕಲ ಅಡ್ಕ, ಕೋಶಾಧಿಕಾರಿಯಾಗಿ ಕುಸುಮ ಭರತ್, ಸಂಗಟನಾ ಕಾರ್ಯದರ್ಶಿಯಾಗಿ ಶಶಿಕಲ ಕೊಲ್ಯ, ಗೀತಾ ಪುರುಷೋತ್ತಮ, ಕ್ರೀಡಾ ಕಾರ್ಯದರ್ಶಿಯಾಗಿ ಲವಿತ ಯತೀಶ್, ಚಂಚಲಾಕ್ಷಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪುಷ್ಪ, ಹೇಮಾವತಿ ಮಾಧವ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೇಮಲತ ಎಸ್. ಕರ್ಕೇರಾ, ಉಷಾಲತ, ದೇವಕಿ ರಾಘವ, ಪುಷ್ಪ ಶೇಖರ್, ನವೀನ ಕೆ., ಆಶಾ ಆರ್. ಕೋಟೆಕಾರ್, ವಿಜಯ ರಾಮ್‍ದಾಸ್, ಗುಲಾಬಿ, ಸೌಮ್ಯ ಕುಸುಮಾಕರ್, ವೇದಾವತಿ ಬೀರಿ, ಮಂಗಳ ರಾಜೇಶ್, ಸುಜಯ ಹೇಮಚಂದ್ರ, ಕಸ್ತೂರಿ, ನಾಗವೇಣಿ ಶ್ರೀಧರ್, ಉಷಾ ಭಾಸ್ಕರ್, ಪ್ರಿಯಾಂಕ ವಿನೋದ್, ಮೋಹಿನಿ ಎಸ್. ಸುವರ್ಣ, ಮಾಲತಿ ಎಚ್., ಜಯಂತಿ, ಕುಮಾರಿ ಪ್ರಕಾಶ್, ಬೇಬಿ, ರತಿ ಗೋಪಾಲ, ಸುಜಾತ ಚೇತಾನಂದ, ಅಶ್ವಿನಿ ಯತೀಶ್ ಆಯ್ಕೆಯಾದರು.


