UN NETWORKS
ಸೋಮೇಶ್ವರ: ದೇಶದ ಮಾಜಿ ಪ್ರಧಾನಿ, ಭಾರತ ಕಂಡ ಅಧ್ಬುತ ಮೇಧಾವಿ ರಾಜಕಾರಣಿ, ದೇಶದ ಅಭಿವೃದ್ಧಿಯ ಹರಿಕಾರ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯ ಆರೋಗ್ಯ ದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಾಗಿದ್ದಾರೆ.
ವಿಶ್ವದೆದುರು ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸಿದ ಮಹಾನ್ ನಾಯಕನ ಆರೋಗ್ಯ ಶೀಘ್ರವಾಗಿ ಸುದಾರಿಸಿ ಗುಣಮುಖರಾಗಿಲಿ ಎಂದು ದೇಶ ಭಕ್ತ ಸಂಘಟನೆ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಶೇಷವಾಗಿ ಪ್ರಾರ್ಥಿಸಲಾಯಿತು.
ಈ ಸಂಧರ್ಭದಲ್ಲಿ ಗೌರವ ಸಲಹೆಗಾರರಾದ ಆನಂದ್ ಕೆ ಅಸೈಗೋಳಿ, ಉಪಾಧ್ಯಕ್ಷರಾದ ರವಿ ಶೆಟ್ಟಿ ಮಾಡೂರು, ಮೋಹನ್ ಸಾಲ್ಯಾನ್, ಗೋಪಿನಾಥ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಪ್ರಮುಖರಾದ ಪ್ರವೀಣ್ ಎಸ್.ಕುಂಪಲ, ಹರೀಶ್ ಅಂಬ್ಲಮೊಗರು,ರಾಕೇಶ್ ಬೈಪಾಸ್, ಕಿರಣ್ ಕೊಲ್ಯ, ಪ್ರವೀಣ್ ಬಸ್ತಿ ಮತ್ತಿತರರು ಉಪಸ್ಥಿತರಿದ್ದರು.




