UN NETWORKS
ಉಳ್ಳಾಲ: ಕ್ಷೇತ್ರದ ಸರ್ವ ಧರ್ಮದ ಜನರ ಬೆಂಬಲದಿಂದ ಶಾಸಕನಾಗಿ ಆಯ್ಕೆಯಾಗುವ ಮೂಲಕ ಸಚಿವನಾಗುವ ಅವಕಾಶ ಸಿಕ್ಕಿದ್ದು, ಜನರ ಆಶೋತ್ತರದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟಿನ ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಗೌರವ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಚರ್ಚ್ನ ಸಹಾಯಕ ಧರ್ಮಗುರು ಪಾ| ಸ್ಟ್ಯಾನಿ ಪಿಂಟೋ ಖಾದರ್ ಅವರನ್ನು ಗೌರವಿಸಿದರು.ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ಪಾ| ಲೈಝಿಲ್ ಡಿ.ಸೋಜ, ಸಿಸ್ಟರ್ ಕಾರ್ಮಿಲ್ ಮಿಸ್ಕಿತ್, ಹೋಲಿ ಏಂಜೆಲ್ಸ್ ಶಾಲಾ ಮುಖ್ಯಸ್ಥೆ ಸಿಸ್ಟರ್ ಸೆವರಿನ್ ಫೆರ್ನಾಂಡೀಸ್, ಚರ್ಚ್ನ ಕಾರ್ಯಕಾರಿ ಸಮಿತಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಕಣಚೂರು ಮೋನು, ಸದಾಶಿವ ಉಳ್ಳಾಲ, ತಾಲೂಕು ಪಂಚಾಯತ್ ಆಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಬಾಝಿಲ್ ಡಿ.ಸೋಜ, ರಿಚ್ಚಾರ್ಡ್ ವೇಗಸ್ ಧರ್ಮನಗರ, ಡೆನ್ನಿಸ್ ಡಿ.ಸೋಜ, ಶಿವಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


