UN NETWORKS
ಮಂಗಳೂರು: ಬಡ ರಿಕ್ಷಾ ಚಾಲಕರನ್ನು ಗುರುತಿಸಿ ಅವರಿಗೆ ಕಿಟ್ ವಿತರಣೆ ಮತ್ತು ಇಫ್ತಾರ್ ಕೂಟ ಏರ್ಪಡಿಸುವುದು ಉತ್ತಮ ಕಾರ್ಯವಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಮಾಸ್ತಿಕಟ್ಟೆ ಅಝಾದ್‍ನಗರ ರಿಕ್ಷಾಚಾಲಕರ ಸಂಘದ ವತಿಯಿಂದ ಭಾನುವಾರ ಮಾಸ್ತಿಕಟ್ಟೆಯಲ್ಲಿ ನಡೆದ ಇಫ್ತಾರ್ ಕೂಟ ಮತ್ತು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ವಿತರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಫ್ತಾರ್ ಮತ್ತು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ. ಸದಸ್ಯ ಮುಸ್ತಫಾ, ಲಿಬ್‍ಝತ್, ಮಾಸ್ತಿಕಟ್ಟೆ ಅಝಾದ್‍ನಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ನಝೀರ್, ಕಾರ್ಯದರ್ಶಿ ರವೂಪ್, ಸದಸ್ಯರಾದ ಸತ್ತಾರ್, ಅಂತೋನಿ, ಸವೇರ, ಕಬೀರ್, ಖಲೀಲ್, ಅಶ್ರಫ್, ಕರಾಮತ್ತ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 67 ಮಂದಿ ಬಡ ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ ಮಾಡಲಾಯಿತು.


