ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಇಂದಿನ ಯುವಜನತೆಗೆ ಹೆಚ್ಚಿನ ರೋಗಗಳು ಅವರು ತಿನ್ನುವ ಆಹಾರದಿಂದಲೇ ಬರುತ್ತಿದೆ. ನಾವು ತಿನ್ನುವ ಆಹಾರ ಬಗ್ಗೆ ಯುವಜನತೆಗೆ ಹೆಚ್ಚು ನಿಗಾ ವಹಿಸಿದಲ್ಲಿ ಹೆಚ್ಚಿನ ರೋಗಗಳನ್ನು ತಡೆಗಟ್ಟಬಹುದು. ಕೊಬ್ಬಿನಿಂದ ಕೂಡಿದ ಕರಿದ ಪದಾರ್ಥ ಸರಿಯಾಗಿ ಬೇಯಿಸದೇ ಮಾಂಸಹಾರ ತಿನ್ನುವುದು, ಸರಿಯಾಗಿ ಶುಚಿಗೊಳಿಸದೇ ಆಹಾರ ಪದಾರ್ಥಗಳನ್ನು ಬಳಸುವುದರಿಂದಲೇ ಹೆಚ್ಚಿನ ರೋಗಗಳು ಬರುತ್ತವೆ, ಮತ್ತು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ ಜನರು ಹೆಚ್ಚು ಗಮನಹರಿಸಿ ಪೋಷಕಾಂಶಯುಕ್ತ ಕೊಬ್ಬುರಹಿತ ಆಹಾರವನ್ನು ಮತ್ತು ಹೆಚ್ಚು ಹೆಚ್ಚು ಹಸಿ ತರಕಾರಿ, ಸೊಪ್ಪು,ಪಲ್ಯಗಳಿಂದ ಕೂಡಿದ ಮೂಲಾಹಾರ ಸೇವಿಸದಲ್ಲಿ ಬಹಳಷ್ಟು ರೋಗಗಳನ್ನು ತಡೆಗಟ್ಟಬಹುದು ಮತ್ತು ರೋಗನಿರೋಧಕ ಶಕ್ತಿಯೂ ವ್ರದ್ಧಿಸುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜಕ ಮತ್ತು ಗ್ರಹರಕ್ಷಕದಳದ ಕಮಾಂಟೆಂಟ್ ಡಾ. ಮುರಳೀ ಮೋಹನ್ ಚೂಂತಾರು ತಿಳಿಸಿದರು.

ಅವರು ನಿಟ್ಟೆವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯವತಿಯಿಂದ ವಿಶ್ವ ಆರೋಗ್ಯ ವಾರ ಮತ್ತು ವಿಶ್ವ ಆರೋಗ್ಯದಿನ (ಎಪ್ರಿಲ್7)ದ ಅಂಗವಾಗಿ ಇನೋಳಿಯ ಸರಕಾರಿ ಶಾಲೆಯಲ್ಲಿ “ದೈಹಿಕ ಆರೋಗ್ಯದಲ್ಲಿ ಆಹಾರದ ಪಾತ್ರ” ಎಂಬ ವಿಷಯದಲ್ಲಿ ನಡೆದ ವಿಚಾರ ಸಂಕೀರಣ ನಡೆಯಿತು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾದ್ಯಾಯರಾದ ಡಾ. ಪ್ರಶಾಂತ್ ಮತ್ತು ಶಿಕ್ಷಕಿ ವೀಣಾವಾಸ್ ಮತ್ತು ಗೀತಾ ಉಪಸ್ಥಿತರಿದ್ದರು.
ಸ್ವಾಗತ ಭಾಷಾಣವನ್ನು ಕುಮಾರಿ ಅನುಷಾ ಮಾಡಿದರು ಮತ್ತು ವಂದನಾರ್ಪಣೆಯನ್ನು ಶಿಕ್ಷಕಿ ಯಶೋದ ಅವರು ನಿರ್ವಹಿಸಿದರು.





