UN NETWORKS
ಉಳ್ಳಾಲ: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರಗಳಿಗೆ ಜನ ಕಿವಿಗೊಡದೆ, ಉಳ್ಳಾಲ ಭಾಗದಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಮುಂದಿನ ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ನ ಕೈ ಹಿಡಿಯಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಕೆ.ಸಿ.ರೋಡಿನಿಂದ ಕೆ.ಸಿನಗರವೆರೆಗೆ ಮನೆ ಮನೆಗೆ ನಡೆದುಕೊಂಡು ತೆರಳಿ ಪ್ರಚಾರ ಕಾರ್ಯ ನಡೆಸಿದರು.
ಅಪಪ್ರಚಾರಗಳಿಂದ ಅಭಿವೃದ್ಧಿಯನ್ನು ಸೋಲಿಸಲು ಅಸಾಧ್ಯ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಜನತೆಗೆ ಮಾಡಿರುವ ಅಭಿವೃದ್ಧಿಯ ಕಾರ್ಯಗಳು ನೆನಪಿದೆ. ಪ್ರಚಾರ ಸಂದರ್ಭ ಎಲ್ಲರೂ ಆಶೀರ್ವಾದಿಸುತ್ತಲೇ ಬಂದಿದ್ದಾರೆ. ಇನ್ನಷ್ಟು ಅಭಿವೃದ್ಧಿ ನಡೆಯಲಿರುವ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜನತೆ ಕಾಂಗ್ರೆಸನ್ನು ಬೆಂಬಲಿಸಲಿದ್ದಾರೆ ಎಂದರು.ಇದೇ ಸಂಧರ್ಭ ಕೆ.ಸಿ ನಗರದ ಫುಟ್ಬಾಲ್ ಆಟವಾಡುತ್ತಿದ್ದ ಯುವಕರ ಜೊತೆಗೆ ತಾವು ಬೆರೆತರು
ಈ ವೇಳೆ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.


