Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಮಾಜಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆ

UllalaVaniBy UllalaVaniApril 28, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ಕಾಂಗ್ರೆಸ್ ಪಕ್ಷದಲ್ಲಿಯೇ ಹಲವು ವರ್ಷಗಳ ಕಾಲ ಇದ್ದು, ಉಳ್ಳಾಲ ಕ್ಷೇತ್ರದಲ್ಲಿ ಪಕ್ಷದ ಜವಾಬ್ದಾರಿಗಳನ್ನು ಹೊತ್ತು ಕಳೆದ ಐದು ವರ್ಷಗಳಿಂದ ಪಕ್ಷದಿಂದ ದೂರವಾಗಿದ್ದ ಉಳ್ಳಾಲನಗರಸಭೆಯ ಪಕ್ಷೇತರ ಅಭ್ಯರ್ಥಿ ಫಾರುಕ್ ಯು.ಹೆಚ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರ್ ಉಳ್ಳಾಲ ಸಹಿತ ಹಲವರ ತಂಡ ಶುಕ್ರವಾರ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿನ ಜೆಡಿಎಸ್ ಚುನಾವಣಾ ಕಾರ್ಯಾಲಯದಲ್ಲಿ ಸೇರ್ಪಡೆಗೊಂಡರು.

ಪಕ್ಷಕ್ಕೆ ಸೇರ್ಪಡೆಗೊಂಡು ಬಳಿಕ ಮಾತನಾಡಿದ ನಗರಸಭೆ ಸದಸ್ಯ ಫಾರುಕ್ ಯು.ಹೆ ಮಂಗಳೂರು (ಉಳ್ಳಾಲ) ಕ್ಷೇತ್ರದ ಕಾಂಗ್ರೆಸ್ ನಲ್ಲಿ ಶಿಕ್ಷಿತರನ್ನು ಕಡೆಗಣಿಸುವ ಪರಿಪಾಠ ಶಾಸಕ ಖಾದರ್ ಅವರಿಂದ ಆಗಿದೆ. ತಮಗೆ ಬೇಕಾದವರನ್ನು ಗುಂಪು ಕೂಡಿಸಿಕೊಂಡು ಅವರ ಕೈಯಲ್ಲೇ ಜವಾಬ್ದಾರಿಯನ್ನು ನೀಡುವ ಕಾರ್ಯ ಆಗಿದೆ. ಅಹಂಕಾರದ ಮಾತುಗಳಿಂದ ನೊಂದು ಉಳ್ಳಾಲದಲ್ಲಿ ಜೆಡಿಎಸ್ ನ ಅಶ್ರಫ್ ಸ್ಪರ್ಧಿಸುತ್ತಿದ್ದಾರೆ. ಅಹಂಕಾರಿಗಳನ್ನು ಅಲ್ಲಾಹು ಎಂದಿಗೂ ಮೆಚ್ಚುವುದಿಲ್ಲ. ಬಿಜೆಪಿಯನ್ನು ಪರೋಕ್ಷವಾಗಿ ಗೆಲ್ಲಿಸುವ ತಂತ್ರ ಅನ್ನುವ ಅಪಪ್ರಚಾರದಲ್ಲೂ ಕಾಂಗ್ರೆಸ್ಸಿಗರು ತೊಡಗಿದ್ದಾರೆ. ಆದರೆ ಎಂತಹ ಪ್ರಚಾರ ನಡೆಸಿದರೂ ಖಾದರ್ ಸೋಲು ಖಚಿತ ಎಂದರು.

ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಞ ಮಾತನಾಡಿ ಖಾದರ್ ಅವರ ಆಹಂಕಾರದ ಮಾತುಗಳು ಇದೀಗ ಅವರಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ನಿರ್ಮಿಸಿದೆ. ಉಳ್ಳಾಲದಲ್ಲಿ ಅಶ್ರಫ್ ಅವರಿಗೆ ಸೇರಿರುವ ಬೆಂಬಲಿಗರಿಂದಾಗಿ ಹೆದರಿ ಖಾದರ್ ಮತ್ತು ಪಟಾಲಾಂ ರಾತ್ರಿಯಿಡೀ ಸುತ್ತಾಡುತ್ತಿದೆ. ಸಹೋದರಿಯೇ ತನ್ನ ಸಹೋದರನನ್ನು ಹತ್ಯೆ ನಡೆಸಿದಾಗ ಉಳ್ಳಾಲ ಭಾಗದ ಹಲವು ಅಮಾಯಕ ಯುವಕರನ್ನು ಠಾಣೆಗೆ ಕರೆಸಿ ಹೊಡೆಸುವಲ್ಲಿಯೂ ಖಾದರ್ ಕೈವಾಡವಿತ್ತು. ಜಿಲ್ಲೆಗೆ ಬೆಂಕಿ ಕೊಡುವುದಾಗಿ ಹೇಳಿದ ನಳಿನ್ ಕಟೀಲ್ ಮತ್ತು ಪ್ರಚೋದನಕಾರಿ ಮಾತುಗಳನ್ನಾಡುವ ಕಲ್ಲಡ್ಕ ಭಟ್ ವಿರುದ್ಧ ಪಿಟ್ಟಿ ಕೇಸುಗಳನ್ನು ಹಾಕಿ ಬಿಡುಗಡೆಗೊಳಿಸುವಂತಹ ಮುಸ್ಲಿಂ ನಾಯಕನೆಂದು ಹೇಳಿಕೊಳ್ಳುವ ಖಾದರ್ ಬೇಕಾ? ಎಂದು ಪ್ರಶ್ನಿಸಿದರು. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ತಮ್ಮಲ್ಲಿ ಖಾದರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವರಾಗಿದ್ದ ಸಂದರ್ಭ ಬೆಡ್ ಶೀಟ್, ಔಷಧಿಯ ವ್ಯವಸ್ಥೆಗಳನ್ನೆಲ್ಲಾ ಹಾಳು ಮಾಡಿಬಿಟ್ಟಿದ್ದಾರೆ.

ಇದನ್ನು ಸರಿಪಡಿಸಲು ನನ್ನಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿರುವುದಾಗಿ ತಿಳಿಸಿದ ಅವರು ಆರೋಗ್ಯ ಕ್ಷೇತ್ರದಲ್ಲಿ ಪ್ರಾಮಾಣಿಕ ಅಧಿಕಾರಿ ಮದನಗೋಪಾಲ್ ಅವರನ್ನು ಒಂದೇ ದಿನದಲ್ಲಿ ವರ್ಗಾವಣೆಗೊಳಿಸಿರುವುದು ಖಾದರ್ ಅವರ ಕೈವಾಡವಾಗಿದೆ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಗುಪ್ತ ಸಭೆಗಳನ್ನು ಅಲ್ಲಲ್ಲಿ ನಡೆಸುತ್ತಿದ್ದಾರೆ. ಕಾರ್ಯಕರ್ತರು ಯಾರೂ ಅಂತಹ ಸಭೆಗಳಲ್ಲಿ ಭಾಗವಹಿಸದೆ ತಪ್ಪು ಗ್ರಹಿಕೆಯನ್ನು ನಡೆಸದಿರಿ ಎಂದು ಸೂಚಿಸಿದರು.

ಜೆಡಿಎಸ್ ಅಭ್ಯರ್ಥಿ ಮಾಜಿ ಮೇಯರ್ ಅಶ್ರಫ್ ಮಾತನಾಡಿ ಹಣದ ಆಸೆಯಿಲ್ಲದೆ ಹಿಂದಿನಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೇನೆ. ಜನರ ಬೆಂಬಲವೇ ಸ್ಪೂರ್ತಿಯಾಗಿದೆ. ಆಹಂಕಾರದ ಮಾತುಗಳನ್ನು ಯಾರಿಗೂ ಹೇಳದಿರಿ. ಕೆಲ ವರ್ಷಗಳ ಹಿಂದೆ ಮಹಾನಗರಪಾಲಿಕೆ ಚುನಾವಣೆಯಲ್ಲಿ ಖಾದರ್ ಮತ್ತು ತಾನು ಜತೆಯಾಗಿಯೇ ಸ್ಪರ್ಧಿಸಿದ್ದೆವು. ಖಾದರ್ ಠೇವಣಿ ಕಳೆದುಕೊಂಡು ಅತ್ತಾವರ ಕ್ಷೇತ್ರದಿಂದ ಸೋಲು ಕಂಡಿದ್ದರೆ, ಬಂದರು ಪ್ರದೇಶದಲ್ಲಿ ತಾನು ಬಹುಮತದಿಂದ ಆಯ್ಕೆಗೊಂಡಿದ್ದೆ. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಸಾಮಥ್ರ್ಯವಿದೆ ಅನ್ನುವುದನ್ನು ಅರಿತುಕೊಳ್ಳಬೇಕಿದೆ. ಇದೀಗ ಜೆಡಿಎಸ್ ಪ್ರಭಾವದಿಂದ ಬೆದರಿ ನಾಳೆ ಹಣವುಳ್ಳವರ ಗುಪ್ತ ಸಭೆಯನ್ನು ಕಾಂಗ್ರೆಸ್ ನಡೆಸುತ್ತಿದೆ. ಭಾಗವಹಿಸಿದವರು ಎಂದಿಗೂ ವಂಚನೆಯ ಮಾತುಗಳಿಗೆ ಮರುಳಾಗದಿರಿ ಎಂದರು.

ಜೆಡಿಎಸ್ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ ಶೆಟ್ಟಿ, ಮುಖಂಡರುಗಳಾದ ಅಕ್ಸಾ ಉಸ್ಮಾನ್, ಝಾಕಿರ್ ಉಳ್ಳಾಲ್, ನಾಸಿರ್, ಹೆಚ್. ಸಾಲಿ , ನಝೀರ್ ಉಳ್ಳಾಲ್, ವಿದ್ಯಾರ್ಥಿ ಜನತಾದಳದ ಸಿನಾನ್, ಅಝೀಝ್ ಮಲಾರ್, ಮೆಹಬೂಬ್, ಸೂಫಿ ಕುಂಞ ಪುತ್ತುಮೋನು , ಸತ್ತಾರ್ ಸಜಿಪ, ಕುಂಞ ಬಾವಾ , ಝೈನುದ್ದೀನ್ ಮುಂತಾದವರು ಉಪಸ್ಥಿತರಿದ್ದರು.

ಉಳ್ಳಾಲ: ಉಳ್ಳಾಲ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾದಳದ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಸಂಸದ ಓವೈಸೀ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಸೇರಿದಂತೆ ವಿವಿಧ ನಾಯಕರು ಶೀಘ್ರದಲ್ಲೇ ಭಾಗವಹಿಸಲಿದ್ದಾರೆ ಎಂದು ಜಾತ್ಯಾತೀತ ಜನತಾದಳದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ ಹೇಳಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆಯ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು
ತೊಕ್ಕೊಟ್ಟು ಉಳ್ಳಾಲ, ದೇರಳಕಟ್ಟೆ, ಮುಡಿಪು ಭಾಗದಲ್ಲಿ ನಡೆಯುವ ಬಹಿರಂಗ ಸಮಾವೇಶಗಳಲ್ಲಿ ಎಲ್ಲಾ ರಾಜ್ಯ ಹಾಗೂ ರಾಷ್ಟ್ರ ಮುಖಂಡರು ಭಾಗವಹಿಸಲಿದ್ದಾರೆ. ಈಗಾಗಲೇ ಎಲ್ಲರನ್ನೂ ಆಹ್ವಾನಿಸಲಾಗಿದೆ. ಅವರಿಂದ ಪ್ರತಿಕ್ರಿಯೆಯೂ ದೊರೆತಿದೆ. ಚುನಾವಣೆ ಶ್ರೀಮಂತರ ಮತ್ತು ಬಡವರ ನಡುವಿನ ಹೋರಾಟವಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲಾಗದ, ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿಯವರನ್ನು ಜನ ಧಿಕ್ಕರಿಸಲಿದ್ದಾರೆ. ಕ್ಷೇತ್ರದ ಶಾಸಕರು ಪ್ರಚಾರಕ್ಕಾಗಿ ಮಾತ್ರ ಸೀಮಿತವಾಗಿದ್ದಾರೆ. ಅಪಘಾತವಾದಾಗ ಅಲ್ಲಿಗೆ ಓಡಿ ಫೋಟೊ ಕ್ಲಿಕ್ಕಿಸಿಕೊಂಡು ಪ್ರಚಾರ ಪಡೆಯುವಂತಹ ಜಾಯಮಾನ ಖಾದರ್ ಅವರದ್ದಾಗಿದೆ. ಜನರ ಅಭಿವೃದ್ಧಿಗೆ ಕೊಡಬೇಕಾದ ಮಹತ್ವವನ್ನು ಪ್ರಚಾರಕ್ಕಾಗಿ ನೀಡುತ್ತಿದ್ದಾರೆ ಎಂದರು.

ಈ ಸಂದರ್ಭ ಜೆಡಿಎಸ್ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ ಶೆಟ್ಟಿ, ಮುಖಂಡರುಗಳಾದ ಅಝೀಝ್ ಮಲಾರ್, ಅಕ್ಸಾ ಉಸ್ಮಾನ್, ಝಾಕಿರ್ ಉಳ್ಳಾಲ್, ನಾಸಿರ್, ಹೆಚ್. ಸಾಲಿ , ನಝೀರ್ ಉಳ್ಳಾಲ್, ವಿದ್ಯಾರ್ಥಿ ಜನತಾದಳದ ಸಿನಾನ್, ದಿನಕರ್ ಉಳ್ಳಾಲ್, ಫಾರುಕ್ ಯು.ಹೆಚ್ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

August 14, 2026

ಕಳೆದುಕೊಂಡ ಹಣ ವಾರಸುದಾರರಿಗೆ ಹಸ್ತಾಂತರ

August 13, 2026

ಕುಂಪಲ ಜಂಕ್ಷನ್‌ನಲ್ಲಿ ಮಾದಕ ವಸ್ತು ಸೇವನೆ ಆರೋಪ

August 13, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

By UllalaVaniAugust 14, 20260

ಉಳ್ಳಾಲ: ಮನಸ್ಸು ಶಾಂತವಾಗಿ ಮತ್ತು ಸ್ಥಿರವಾಗಿದ್ದಾಗ ಮಾತ್ರ ಏಕಾಗ್ರತೆಯನ್ನು ಸಾಧಿಸಲು ಸಾಧ್ಯ. ಮಕ್ಕಳು ಓದಲು ಕುಳಿತುಕೊಳ್ಳುವ ಮುನ್ನ ಉಸಿರಾಟದ ವ್ಯಾಯಾಮಕ್ಕೆ…

ಮೂಡಾ ವ್ಯಾಪ್ತಿಯ ಕೊಟ್ಟಾರ ಆಸ್ತಿ ಖರೀದಿ ಪ್ರಕ್ರಿಯೆ: ಮೂಲ ದಾಖಲೆಗಳ ಕುರಿತು ಪ್ರಶ್ನೆಗಳ ಸರಮಾಲೆ

August 14, 2026

ಉಳ್ಳಾಲವಾಣಿ ಲೋಗೋ ಉಪಯೋಗಿಸಿ ಸಂಸ್ಥೆಯ ಹೆಸರಿನಲ್ಲಿ ಎಡಿಟ್‌ ಮಾಡಿದ ಫೋಟೋ ಶೇರ್ — ಕಾನೂನು ಕ್ರಮದ ಎಚ್ಚರಿಕೆ

August 14, 2026

ಬಂಟ್ವಾಳ: ಗಾಂಜಾ ಸಹಿತ ಮೂವರ ಬಂಧನ- 4.90 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ

August 14, 2026
1 2 3 … 2,059 Next
Automatic YouTube Gallery

5ನೇ ತರಗತಿ ವಿದ್ಯಾರ್ಥಿಯ ಸಮಯಪ್ರಜ್ಞೆ: ವಿದ್ಯುತ್ ಯಂತ್ರಕ್ಕೆ ಸಿಲುಕಿದ್ದ ಸಿಬ್ಬಂದಿಯ ಪ್ರಾಣಾಪಾಯ ತಪ್ಪಿಸಿದ ಬಾಲಕ

ಅಪಾಯದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ನಿರ್ಧಾರದಿಂದ ತಾಲೂಕಿನಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.
ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾನ್ವಿತ್ ತನ್ನ ಸಮಯಪ್ರಜ್ಞೆಯಿಂದ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರ ಪ್ರಾಣಾಪಾಯವನ್ನು ತಪ್ಪಿಸಿದ್ದಾನೆ. ...
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಕೆಲಸ ನಡೆಯುತ್ತಿದ್ದ ವೇಳೆ ಸಿಬ್ಬಂದಿಯೊಬ್ಬರ ಬೆರಳು ಆಕಸ್ಮಿಕವಾಗಿ ವಿದ್ಯುತ್ ಚಾಲಿತ ತುರಿಯುವ ಯಂತ್ರಕ್ಕೆ ಸಿಲುಕಿಕೊಂಡಿದೆ. ನೋವಿನಿಂದ ಸಿಬ್ಬಂದಿ ಕಿರುಚಿಕೊಂಡಿದ್ದು, ಆ ಶಬ್ದವನ್ನು ಕೇಳಿದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮಾನ್ವಿತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾನೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ, ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಸಿಬ್ಬಂದಿಗೆ ಮತ್ತಷ್ಟು ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯವಾಗಿದೆ. ಮಾನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ಶ್ಲಾಘಿಸಿದ್ದಾರೆ.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋನಯ್ಯ ನಾಯಕ್ ಹಾಗೂ ಸಿಆರ್‌ಪಿ ಜ್ಯೋತಿ ಕೂಡ ಶಾಲೆಗೆ ಭೇಟಿ ನೀಡಿ ಬಾಲಕನ ಸಮಯೋಚಿತ ಕ್ರಮವನ್ನು ಪ್ರಶಂಸಿಸಿದ್ದಾರೆ. ಅಪಾಯದ ಕ್ಷಣದಲ್ಲಿ ಗಾಬರಿಗೊಳ್ಳದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ ಪುಟ್ಟ ಮಾನ್ವಿತ್‌ನ ಸಮಯಪ್ರಜ್ಞೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
5ನೇ ತರಗತಿ ವಿದ್ಯಾರ್ಥಿಯ ಸಮಯಪ್ರಜ್ಞೆ: ವಿದ್ಯುತ್ ಯಂತ್ರಕ್ಕೆ ಸಿಲುಕಿದ್ದ ಸಿಬ್ಬಂದಿಯ ಪ್ರಾಣಾಪಾಯ ತಪ್ಪಿಸಿದ ಬಾಲಕ
Now Playing
5ನೇ ತರಗತಿ ವಿದ್ಯಾರ್ಥಿಯ ಸಮಯಪ್ರಜ್ಞೆ: ವಿದ್ಯುತ್ ಯಂತ್ರಕ್ಕೆ ಸಿಲುಕಿದ್ದ ಸಿಬ್ಬಂದಿಯ ಪ್ರಾಣಾಪಾಯ ತಪ್ಪಿಸಿದ ಬಾಲಕ
ಅಪಾಯದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ...
ಅಪಾಯದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ನಿರ್ಧಾರದಿಂದ ತಾಲೂಕಿನಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.
ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾನ್ವಿತ್ ತನ್ನ ಸಮಯಪ್ರಜ್ಞೆಯಿಂದ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರ ಪ್ರಾಣಾಪಾಯವನ್ನು ತಪ್ಪಿಸಿದ್ದಾನೆ. ...
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಕೆಲಸ ನಡೆಯುತ್ತಿದ್ದ ವೇಳೆ ಸಿಬ್ಬಂದಿಯೊಬ್ಬರ ಬೆರಳು ಆಕಸ್ಮಿಕವಾಗಿ ವಿದ್ಯುತ್ ಚಾಲಿತ ತುರಿಯುವ ಯಂತ್ರಕ್ಕೆ ಸಿಲುಕಿಕೊಂಡಿದೆ. ನೋವಿನಿಂದ ಸಿಬ್ಬಂದಿ ಕಿರುಚಿಕೊಂಡಿದ್ದು, ಆ ಶಬ್ದವನ್ನು ಕೇಳಿದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮಾನ್ವಿತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾನೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ, ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಸಿಬ್ಬಂದಿಗೆ ಮತ್ತಷ್ಟು ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯವಾಗಿದೆ. ಮಾನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ಶ್ಲಾಘಿಸಿದ್ದಾರೆ.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋನಯ್ಯ ನಾಯಕ್ ಹಾಗೂ ಸಿಆರ್‌ಪಿ ಜ್ಯೋತಿ ಕೂಡ ಶಾಲೆಗೆ ಭೇಟಿ ನೀಡಿ ಬಾಲಕನ ಸಮಯೋಚಿತ ಕ್ರಮವನ್ನು ಪ್ರಶಂಸಿಸಿದ್ದಾರೆ. ಅಪಾಯದ ಕ್ಷಣದಲ್ಲಿ ಗಾಬರಿಗೊಳ್ಳದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ ಪುಟ್ಟ ಮಾನ್ವಿತ್‌ನ ಸಮಯಪ್ರಜ್ಞೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಸರಗೋಡು: ನೀರಿನಲ್ಲಿ ಮು#*ಳುಗಿ ಸಾವ*ನ್ನ#ಪ್ಪಿದ 8ನೇ ತರಗತಿ ವಿದ್ಯಾರ್ಥಿ
Now Playing
ಕಾಸರಗೋಡು: ನೀರಿನಲ್ಲಿ ಮು#*ಳುಗಿ ಸಾವ*ನ್ನ#ಪ್ಪಿದ 8ನೇ ತರಗತಿ ವಿದ್ಯಾರ್ಥಿ
ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ಸಾ#ವು: ಅಬೂಬಕರ್ ಅಸನ್ ಮೃ#ತ ...
ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ಸಾ#ವು: ಅಬೂಬಕರ್ ಅಸನ್ ಮೃ#ತ ವಿದ್ಯಾರ್ಥಿ

ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version