UN NETWORKS
ಮುಡಿಪು: ರಕ್ಷಣಾ ಬೇಲಿಯಾಗಬೇಕಿದ್ದ ಪೊಲೀಸರೇ ಕೇವಲ ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಿರುವು ಮೃಗೀಯ ವರ್ತನೆಯಾಗಿದೆ. ಈ ಘಟನೆ ಮಾನವ ಸಮುದಾಯವನ್ನೇ ತಲ್ಲಣಗೊಳಿಸಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಅಭಿಪ್ರಾಯಪಟ್ಟರು.
ಜಮ್ಮು ಕಾಶ್ಮೀರದಲ್ಲಿ ನಡೆದ ಆಸಿಫಾ ಹತ್ಯೆ ಖಂಡಿಸಿ ಡಿವೈಎಫ್ ಐ ವತಿಯಿಂದ ಶನಿವಾರ ಮುಡಿಪು ಜಂಕ್ಷನ್ ನಲ್ಲಿ ನಡೆದ ಮೊಂಬತ್ತಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದು ಆರೋಪಿಗಳು ಪವಿತ್ರ ದೇವಾಲಯದಲ್ಲಿ ಬಾಲಕಿಯನ್ನು ಭೀಕರವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದಾಗ ಆರೋಪಿ ಪೊಲೀಸ್ ಬಾಲಕಿ ಯಾರದ್ದೋ ಜೊತೆ ಓಡಿ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದನು. ಬಾಲಕಿ ಪರವಾಗಿ ಸತತ ಪ್ರತಿಭಟನೆ, ಹೋರಾಟ ನಡೆಸಿದ ಫಲವಾಗಿ ಅಲ್ಲಿನ ಸರ್ಕಾರ ದ ಆದೇಶದ ಮೇರೆಗೆ ಉನ್ನತ ತನಿಖೆ ನಡೆದು ಆರೋಪಿ ತಂಡದ ಲ್ಲಿದ್ದರೂ ಪ್ರಕರ ಬೆಳಕಿಗೆ ಬಂದಿದ್ದು, ಕಠಿಣ ಶಿಕ್ಷೆಯಾಗುವುದು ಶತಃಸಿದ್ಧ ಎಂದು ಹೇಳಿದರು.
ಮೇಲ್ಜಾತಿಯವರೇ ವಾಸಿಸುವ ಪ್ರದೇಶದಿಂದ ಕುಟುಂಬ ಓಡಿಸುವ ನಿಟ್ಟಿನಲ್ಲಿ ಕೃತ್ಯ ನಡೆದಿದ್ದು 60 ವರ್ಷದ ಮುದುಕ, ಆತನ ಮಗ, ಸ್ನೇಹಿತರು, ಪೊಲೀಸ್ ಭಾಗವಹಿದ್ದು ನಿಜಕ್ಕೂ ಅಮಾನವೀಯ. ಘಟನೆ ಬಳಿಕ ಪುಟ್ಟ ಹೆಣ್ಮಕ್ಕಳು ಇರುವ ಮನೆಮಂದಿ ಆತಂಕಿತರಾಗಿದ್ದಾರೆ. ತಾನು ಹೆಣ್ಣಾಗಿ ಹುಟ್ಟಿದ್ದು ತಪ್ಪೇ ಎಂದು ಹೆಣ್ಮಕ್ಕಳು ಪ್ರಶ್ನಿಸುವಂತಾಗಿದೆ ಎಂದರು.
ಡಿವೈಎಫ್ ಐ ಮುಖಂಡ ರಾದ ನಿತಿಲ್ ಕುತ್ತಾರ್, ರಝಾಕ್ ಮೊಂಟೆಪದವು, ಇಬ್ರಾಹಿಂ ಮದಕ, ಝುಬೈರ್ ಮುಡಿಪು, ಸುನಿಲ್ ಕುತ್ತಾರ್ ಇನ್ನಿತರರು ಉಪಸ್ಥಿತರಿದ್ದರು.


