UN NETWORKS
ಉಳ್ಳಾಲ: ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ,. ಇತರರಿಗೆ ಸಹಕಾರಿಯಾಗುವಂತಹ ಮನೋಭಾವವನ್ನು ಇಟ್ಟುಕೊಂಡು ಸಂಘಟಕರು ಹಮ್ಮಿಕೊಂಡಿರುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಹಾಗೂ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ಎಂದು ಬದ್ರಿಯ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ ಹೇಳಿದರು.
ಅವರು ಬದ್ರಿಯಾ ಜುಮಾ ಮಸೀದ್ ದೇರಳಕಟ್ಟೆ, ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್(ರಿ) ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಭಾನುವಾರ ಜರಗಿದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇರಳಕಟ್ಟೆ ವಿದ್ಯಾರತ್ನ ಅಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ರಕ್ತದಾನದ ಮೂಲಕ ಜೀವದಾನದಂತಹ ಮಹತ್ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವುದು ಅವಶ್ಯಕ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾದ ಸಂದೇಶ ಒದಗಿಸುತ್ತದೆ .ರಕ್ತದ ಅವಶ್ಯಕತೆಯಿದ್ದಾಗ ಜಾತಿ, ಧರ್ಮ ಯಾವುದೂ ಮನಸ್ಸಿಗೆ ಬರುವುದಿಲ್ಲ. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸುಂದರ ತಾರುಣ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.
ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬದ್ರಿಯ ಜುಮಾ ಮಸೀದಿ ಗೌರವಾಧ್ಯಕ್ಷ ಇದಿನಬ್ಬ ಹಾಜಿ, ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ದೇರಳಕಟ್ಟೆ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಚೇಯ್ಯರ್ಮಾನ್ ಕೆ.ಅಬೂಬಕರ್ ಹಾಜಿ, ಭಾರತಿಯ ಕೃಷಿಕ ಸಮಾಜ ಅಧ್ಯಕ್ಷ ಎ.ಎ ಹೈದರ್ ಪರ್ತಿಪ್ಪಾಡಿ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮುಖ್ಯಸ್ಥ ಎಡ್ರ್ವಡ್ ದೇರಳಕಟ್ಟೆ ಅನ್ಸಾರುಲ್ ಮುಸ್ಲಿಮೀನ್ ಅಸೋಶಿಯೆಷನ್ ಅಧ್ಯಕ್ಷ ಇಲ್ಯಾಸ್ ಹಾಜಿ, ಪತ್ರಕರ್ತ ಇಸ್ಮತ್ ಪಜೀರ್, ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಅಬ್ದುಲ್ ರಹ್ಮಾನ್ ಶೇಟ್, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಸದಸ್ಯ ಹಾಜಿ ಕಬೀರ್.ಡಿ, ಬದ್ಯಾರ್ ಪಾರೂಕ್ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಹಾಜಿ, ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರಶೀದ್ ಕೆ.ಎಂ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಅಡ್ಮಿನ್ಗಳಾದ ಇಮ್ರಾನ್ ಅಡ್ಡೂರು, ಸಮೀರ್ ಸೀಕೊ ಉಳಾಯಿಬೆಟ್ಟು, ಶಾಫಿ ಕಿನ್ಯಾ, ಕಾಂಗ್ರೇಸ್ ಮುಖಂಡ ರವಿರಾಜ್ ಶೆಟ್ಟಿ, ಉದ್ಯಮಿ ಹಸನ್ ಕಾನೆಕೆರೆ, ಸಮಾಜ ಸೇವಕ ಅರೀಫ್ ಜಲಾಲ್ಬಾಗ್,ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಪ್ರ.ಕಾರ್ಯದರ್ಶಿ ಅಶ್ರಫ್.ಡಿ ಸ್ವಾಗತಿಸಿದರು. ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರಶೀದ್ ಕೆ.ಎಂ ವಂದಿಸಿದರು.
ಹಯಾತುಲ್ ಇಸ್ಲಾಂ ಮದರಸ ಮುಅಲೀಂ ಕೆ.ಎಂ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು. ಶರತ್ ರಾಜ್ ಶೆಟ್ಟೆ, ಉದ್ಯಮಿ ಹಸನ್ ಸೇರಿದಂತೆ 75 ಮಂದಿ ರಕ್ತದಾನ ಮಾಡಿದರು.


